ಕರ್ನಾಟಕ

karnataka

ETV Bharat / state

ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಕೋಟ್ಯಧೀಶನಾದ ಮಂಡ್ಯದ ಯುವಕ - ಲಾಟರಿಯಲ್ಲಿ ಒಂದು ಕೋಟಿ ರೂಪಾಯಿ ಗೆದ್ದ ಮಂಡ್ಯದ ಯುವಕ

ಮದ್ದೂರು ತಾಲೂಕಿನ ಸೋಮನಹಳ್ಳಿಯ ಉದ್ಯಮಿಯ ಪುತ್ರ ಕೇರಳದ ಲಾಟರಿಯಲ್ಲಿ ಒಂದು ಕೋಟಿ ರೂಪಾಯಿ ಗೆದ್ದಿದ್ದಾನೆ.

Mandya bpy won a Kerala lottery
ಖುಲಾಯಿಸಿದ ಅದೃಷ್ಟ

By

Published : Feb 9, 2021, 3:38 PM IST

Updated : Feb 10, 2021, 6:49 PM IST

ಮಂಡ್ಯ: ಫೇಸ್​ಬುಕ್ ಫ್ರೆಂಡ್ ಭೇಟಿ ಮಾಡಲು ಹೋದ ಮಂಡ್ಯದ ಮದ್ದೂರು ಯುವಕನಿಗೆ ಅದೃಷ್ಟ ಖುಲಾಯಿಸಿದ್ದು, ಕೇರಳದ ಲಾಟರಿಯಲ್ಲಿ ಒಂದು ಕೋಟಿ ರೂಪಾಯಿ ಬಂಪರ್ ಬಹುಮಾನ ಗೆಲ್ಲುವ ಮೂಲಕ ಕೋಟ್ಯಧಿಪತಿಯಾಗಿದ್ದಾನೆ.

ರಾತ್ರೋರಾತ್ರಿ ಕೋಟ್ಯಧೀಶನಾದ ಮಂಡ್ಯದ ಯುವಕ

ಮದ್ದೂರು ತಾಲೂಕಿನ ಸೋಮನಹಳ್ಳಿಯ ಉದ್ಯಮಿಯ ಪುತ್ರ ಸೋಹನ್ ಬಲರಾಮ್ ಒಂದು ಕೋಟಿ ರೂಪಾಯಿ ಗೆದ್ದಿದ್ದಾನೆ. ಕೇರಳದ ಪುಥನಾಥಣಿಯಲ್ಲಿನ ಅಂಗಡಿಯಲ್ಲಿ ಖರೀದಿಸಿದ ಭಾಗ್ಯಧರ ಲಾಟರಿಗೆ ಕೋಟಿ ರೂ. ಬಹುಮಾನ ದೊರೆತಿದೆ.

ಇದನ್ನೂ ಓದಿ:ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕುರಿತು ಸಚಿವ ಶ್ರೀರಾಮುಲು ಪ್ರತಿಕ್ರಿಯೆ

ಫೇಸ್​ಬುಕ್ ಫ್ರೆಂಡ್ ಭೇಟಿ ಮಾಡಲು ಶನಿವಾರ ಕೇರಳದ ಪುಥನಾಥಣಿಗೆ ಸೋಹನ್ ಬಲರಾಮ್ ತೆರಳಿದ್ದ. ಸ್ನೇಹಿತನನ್ನು ಭೇಟಿ ಮಾಡಿ ವಾಪಸ್​​ ಬರುವಾಗ 100 ರೂಪಾಯಿ ಕೊಟ್ಟು ಸ್ನೇಹಿತರ ಒತ್ತಾಯದ ಮೇರೆಗೆ ಲಾಟರಿ ಕೊಂಡಿದ್ದ. ಆತ ಖರೀದಿಸಿದ ಲಾಟರಿ ಸಂಖ್ಯೆಗೆ ಒಂದು ಕೋಟಿ ರೂಪಾಯಿ ಬಂಪರ್ ಬಹುಮಾನ ಸಿಕ್ಕಿದೆ.

Last Updated : Feb 10, 2021, 6:49 PM IST

For All Latest Updates

ABOUT THE AUTHOR

...view details