ಕರ್ನಾಟಕ

karnataka

ETV Bharat / state

ಕೌನ್ ಬನೇಗಾ ಲಕ್ಷಾಧಿಪತಿ? ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ - ಮಂಡ್ಯ ಸಂವಿಧಾನ ಪ್ರಬಂಧ ಸುದ್ದಿ

ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಪರ್ಧಾಳುಗಳು ಮನೆಯಲ್ಲೇ ಕುಳಿತು ಪ್ರಬಂಧ ಬರೆದು ಕಳುಹಿಸಬಹುದಾಗಿದೆ. ಆದರೆ ಈ ಸ್ಪರ್ಧೆ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ. ಪ್ರೌಢಶಾಲೆ ವಿಭಾಗ, ಪದವಿಪೂರ್ವ ವಿಭಾಗ ಹಾಗೂ ಪದವಿ/ ಸ್ನಾತಕೋತ್ತರ ವಿಭಾಗಕ್ಕೆ ಪ್ರತ್ಯೇಕವಾಗಿ ಪ್ರಬಂಧ ವಿಷಯಗಳನ್ನು ತಿಳಿಸಲಾಗಿದೆ.

mandya-bahujan-student-organization-essay-competition
ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

By

Published : Dec 20, 2019, 5:39 PM IST

ಮಂಡ್ಯ: ಸಕ್ಕರೆ ನಾಡಲ್ಲಿ ಸಂವಿಧಾನ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು ವಿಜೇತ ವಿದ್ಯಾರ್ಥಿಗೆ ಒಂದು ಲಕ್ಷ ರೂ ಬಹುಮಾನ ನೀಡಿ ಬಹುಜನ ವಿದ್ಯಾರ್ಥಿ ಸಂಘಟನೆ ಪುರಸ್ಕರಿಸಲಿದೆ.

ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಪರ್ಧಾಳುಗಳು ಮನೆಯಲ್ಲೇ ಕುಳಿತು ಪ್ರಬಂಧ ಬರೆದು ಕಳುಹಿಸಬಹುದಾಗಿದೆ. ಆದರೆ ಸ್ಪರ್ಧೆ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ. ಪ್ರೌಢಶಾಲೆ ವಿಭಾಗ, ಪದವಿಪೂರ್ವ ವಿಭಾಗ ಹಾಗೂ ಪದವಿ/ ಸ್ನಾತಕೋತ್ತರ ವಿಭಾಗಕ್ಕೆ ಪ್ರತ್ಯೇಕವಾಗಿ ಪ್ರಬಂಧ ವಿಷಯಗಳನ್ನು ತಿಳಿಸಲಾಗಿದೆ.

ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಪ್ರೌಢಶಾಲೆ ವಿಭಾಗಕ್ಕೆ ಭಾರತದ ಸಂವಿಧಾನ ರಚನೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪಾತ್ರ. ಪದವಿ ಪೂರ್ವ ವಿಭಾಗಕ್ಕೆ ಭಾರತ ಸಂವಿಧಾನದ ಪ್ರಸ್ತಾವನೆಯ ಮಹತ್ವ. ಪದವಿ/ಸ್ನಾತಕೋತ್ತರ ವಿಭಾಗಕ್ಕೆ ಭಾರತೀಯ ಸಮಾಜ ಪರಿವರ್ತನೆಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳು ಹಾಗು ರಾಜ್ಯ ನೀತಿ ನಿರ್ದೇಶಕ ತತ್ವಗಳ ಪಾತ್ರ ಕುರಿತು ವಿಷಯಗಳನ್ನು ನಿಗದಿ ಮಾಡಲಾಗಿದೆ.

ಪ್ರಬಂಧವನ್ನು ಜನವರಿ 10ರೊಳಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬುಕ್ ಸೆಂಟರ್ , 8ನೇ ಕ್ರಾಸ್, ಗಾಂಧಿನಗರ, ಮಂಡ್ಯ ಜಿಲ್ಲೆ, ಇಲ್ಲಿಗೆ ತಮ್ಮ ತಮ್ಮ ಶಾಲೆ, ಕಾಲೇಜು ಮುಖ್ಯಸ್ಥರ ಮೊಹರಿನೊಂದಿಗೆ ಸ್ವಹಸ್ತಾಕ್ಷರದಲ್ಲಿ ಬರೆದು ಕಳುಹಿಸಬೇಕು ಎಂದು ಆಯೋಜಕರು ತಿಳಿಸಿದ್ದಾರೆ.

ABOUT THE AUTHOR

...view details