ಮಂಡ್ಯ: ಅಪಘಾತದಲ್ಲಿ ಗಾಯಗೊಂಡಿದ್ದ ಮಂಡ್ಯದ ಕೆರಗೋಡು ಪೊಲೀಸ್ ಠಾಣೆಯ ಎಎಸ್‌ಐ ನಟರಾಜು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ಕೆರಗೋಡು ಎಎಸ್‌ಐ ಸಾವು - ಮಂಡ್ಯ ಅಪರಾಧ ಸುದ್ದಿ,
ಗಾಯಗೊಂಡಿದ್ದ ಕೆರಗೋಡು ಎಎಸ್‌ಐ ಚಿಕಿತ್ಸೆ ಫಲಕಾರಿಯಾಗದೇ ಮೈಸೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎಎಸ್‌ಐ ನಟರಾಜು
ಇತ್ತೀಚೆಗೆ ಕರ್ತವ್ಯದಲ್ಲಿ ಇದ್ದ ವೇಳೆ ಬೈಕ್ನಿಂದ ಬಿದ್ದು ತೀವ್ರ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಧಿಕಾರಿ ಸಾವನ್ನಪ್ಪಿದ್ದಾರೆ.
ಮೃತ ಅಧಿಕಾರಿ ಸಾವಿಗೆ ಸಹದ್ಯೋಗಿಗಳು ಕಂಬನಿ ಮಿಡಿದಿದ್ದು, ಪೊಲೀಸ್ ಇಲಾಖೆ ಮೃತ ಅಧಿಕಾರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಂತಾಪ ಸೂಚಿಸಿತು.