ಮಂಡ್ಯ: ಪಡಿತರ ಅಕ್ಕಿ ತಿನ್ನೋರಿಗೆ ಏನಾದರೂ ಆದರೆ ಸರ್ಕಾರ ಪರಿಹಾರ ಕೊಡುತ್ತೆ. ಸರ್ಕಾರ ಕಳುಹಿಸೋ ಅಕ್ಕಿಯನ್ನು ನಾವು ವಿತರಣೆ ಮಾಡುತ್ತೇವೆ. ಹೀಗೆ ಗ್ರಾಹಕರಿಗೆ ಧಮಕಿ ಹಾಕಿ, ಕಳಪೆ ಅಕ್ಕಿಯನ್ನು ವಿತರಣೆ ಮಾಡಿದ ಪ್ರಕರಣ ಮದ್ದೂರು ತಾಲೂಕಿನ ಚಾಪುರದೊಡ್ಡಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ನಡೆದಿದೆ.
ಪಡಿತರ ಅಕ್ಕಿ ತಿಂದು ಸತ್ರೆ, ಪರಿಹಾರ ಸಿಗುತ್ತಂತೆ.. ಇಲ್ಲೊಬ್ಬ ಮಹಾಶಯ ಹೇಳ್ತಾವ್ನೇ.. - ಅನ್ನಭಾಗ್ಯ ಯೋಜನೆ-ಮಂಡ್ಯ
ಪಡಿತರ ಅಕ್ಕಿ ತಿಂದು ಏನಾದರೂ ಆದರೆ ನಾನು ಜವಾಬ್ದಾರನಲ್ಲ. ಸರ್ಕಾರ ಪರಿಹಾರ ಕೊಡತ್ತೆ ಅಂತಾ ಪಡಿತರ ಅಂಗಡಿ ಮಾಲೀಕ ಹೇಳಿರುವ ವಿಡಿಯೋ ಈ ಟಿವಿ ಭಾರತ್ಗೆ ಲಭ್ಯವಾಗಿದೆ.
ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಕಲ್ಲು, ಮಣ್ಣು ಮಿಶ್ರಿತ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು. ಇದನ್ನು ಗ್ರಾಹಕರು ಪ್ರಶ್ನೆ ಮಾಡಿದ್ದಕ್ಕೆ, ಪಡಿತರ ಅಕ್ಕಿ ತಿಂದು ಏನಾದರೂ ಆದರೆ ನಾನು ಜವಾಬ್ದಾರನಲ್ಲ. ಸರ್ಕಾರ ಪರಿಹಾರ ಕೊಡತ್ತೆ ಅಂತಾ ಅಂಗಡಿ ಮಾಲೀಕ ಹೇಳುವ ವಿಡಿಯೋ ಈಟಿವಿ ಭಾರತ್ಗೆ ಲಭ್ಯವಾಗಿದೆ.
ಅಂಗಡಿ ಮಾಲೀಕ ತ್ಯಾಗರಾಜ್ ಎಂಬಾತ ಪಡಿತರ ಅಕ್ಕಿ ತಿಂದು ಸತ್ತರೆ ಸರ್ಕಾರ ಪರಿಹಾರ ನೀಡುತ್ತೆ ಅಂತಾ ಉಡಾಫೆ ಉತ್ತರ ನೀಡಿದ್ದಾನೆ. ಇದೇ ಅಂಗಡಿ ಮಾಲೀಕನ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಮಾಲೀಕನ ಮೇಲೆ ಕ್ರಮ ಕೈಗೊಳ್ಳಬೇಕು. ಸರ್ಕಾರವೇ ಈ ರೀತಿಯ ಅಕ್ಕಿ ವಿತರಣೆ ಮಾಡಿದರೆ ವಾಪಸ್ ಪಡೆದು ಗ್ರಾಹಕರ ಆರೋಗ್ಯ ಕಾಪಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.