ಕರ್ನಾಟಕ

karnataka

ETV Bharat / state

ಮಂಡ್ಯ ಅಖಾಡದಲ್ಲಿ 'ಜೋಡೆತ್ತು'ಗಳಿಗೆ ಸಾಥ್ ನೀಡುತ್ತಾ 'ಗೂಳಿ'..? - undefined

ದರ್ಶನ್ ಹಾಗೂ ಯಶ್ ಮಂಡ್ಯದಲ್ಲಿ ಸುಮಲತಾ ಪರ ಅಬ್ಬರದ ಪ್ರಚಾರ ಮಾಡುತ್ತಿದ್ದು, ಇದುವರೆಗೂ ಸುದೀಪ್ ಪ್ರಚಾರಕ್ಕೆ ಬರದಿರುವುದು ಅಂಬಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಇನ್ನೆರಡು ದಿನಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು ಇನ್ನಾದರೂ ಸುದೀಪ್ ಅಖಾಡಕ್ಕೆ ಇಳಿಯುತ್ತಾರಾ? ಕಾದು ನೋಡಬೇಕು.

ದರ್ಶನ್​​​​, ಯಶ್​, ಸುದೀಪ್​

By

Published : Apr 14, 2019, 3:10 PM IST

ಕರ್ನಾಟಕ ಲೋಕಸಭೆ ಚುನಾವಣೆಗೆ ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇದೆ. ಬಹಿರಂಗ ಪ್ರಚಾರಕ್ಕೆ ಉಳಿದಿರುವುದು ಕೇವಲ ಎರಡು ದಿನಗಳು ಮಾತ್ರ. ಇತ್ತ ಮಂಡ್ಯದಲ್ಲಿ ಸುಮಲತಾ ಅಂಬರೀಶ್​​​​​, ಮೈತ್ರಿ ಸರ್ಕಾರದ ನಾಯಕರಿಗೆ ಬೆವರಿಳಿಸುವಂತೆ ಪ್ರಚಾರ ಕಾರ್ಯದಲ್ಲಿ ಮಾಡುತ್ತಿದ್ದಾರೆ.

ಅಂಬಿ ಕುಟುಂಬದೊಂದಿಗೆ ಸುದೀಪ್ ದಂಪತಿ

ದರ್ಶನ್ ಹಾಗೂ ಯಶ್ ಸುಮಲತಾ ಪರ ಅಖಾಡಕ್ಕೆ ಇಳಿದಾಗ, ಕಿಚ್ಚ ಸುದೀಪ್ ಕೂಡಾ ಸುಮಲತಾ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬಂದಿತ್ತು. ಆದರೆ ಇದುವರೆಗೂ ಸುದೀಪ್ ಮಾತ್ರ ಮಂಡ್ಯದಲ್ಲಿ ಸುಮಲತಾ ಅವರ ಪರ ಪ್ರಚಾರಕ್ಕೆ ಹೋಗುವ ವಿಚಾರವಾಗಿ ಮೌನವಹಿಸಿರುವುದು ಅಂಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಸುಮಲತಾ ಅವರ ಪರ ಪ್ರಚಾರ ಮಾಡಲು ಕಿಚ್ಚ ಬರಬೇಕಿತ್ತು ಎಂಬ ಕೂಗು ಮಂಡ್ಯದಲ್ಲಿ ಕೇಳಿ ಬರುತ್ತಿದೆ. ಈ ಕೂಗಿಗೆ ಪ್ರಬಲವಾದ ಕಾರಣವೂ ಇದೆ.‌ ಸುದೀಪ್ ಅವರ ಬೆಳವಣಿಗೆಯ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಇದ್ದರು ಎಂಬ ವಿಷಯ ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲದೆ ಸುದೀಪ್ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿಯ ಯಶಸ್ಸಿನ ಹಿಂದೆ ಮಂಡ್ಯದ ಗಂಡು ಇದ್ದರು ಎಂಬುದು ಕೂಡಾ ಓಪನ್​​ ಸೀಕ್ರೇಟ್.

ಅಂಬರೀಶ್ , ಸುದೀಪ್​

ಕೆಸಿಸಿ ಕಪ್‌ನಲ್ಲಿ ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸಿ ಟೂರ್ನಿಯ ಕಳೆ ಹೆಚ್ಚಿಸಿದ್ದರು. ಹಾಗೂ ಈ ಟೂರ್ನಿಯನ್ನು 2012 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಅಲ್ಲದೆ‌ ಈ ಟೂರ್ನಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಈ ಎಲ್ಲಾ ವಿಷಯದಲ್ಲೂ ಕಲಿಯುಗ ಕರ್ಣ ಅಂಬರೀಶ್ ಪಾತ್ರ ಬಹುಮುಖ್ಯವಾಗಿತ್ತು ಎಂಬ ಅಂಶ ಕಿಚ್ಚ ಸುದೀಪ್ ಅವರಿಗೂ ಗೊತ್ತಿದೆ. ಇದಲ್ಲದೆ ರೆಬೆಲ್​​​​​​​​​​​​​​​​​​​ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಒಡೆತನದ ಕಿಚ್ಚ ಕ್ರಿಯೇಷನ್ ಮೊದಲ ಸಿನಿಮಾ 'ಅಂಬಿ ನಿನಗೆ ವಯಸ್ಸಾಯ್ತೋ' ಚಿತ್ರದಲ್ಲಿ ಅನಾರೋಗ್ಯದ ನಡುವೆಯೂ ಕಿಚ್ಚನಿಗಾಗಿ ಒಲ್ಲೆ ಅನ್ನದೆ ಆ್ಯಕ್ಟ್‌ ಮಾಡಿದ್ರು. ಇವೆಲ್ಲದಕ್ಕೂ ಮಿಗಿಲಾಗಿ ಸುದೀಪ್ ಹಾಗೂ ಅಂಬರೀಶ್ ನಡುವೆ ಭಾವನಾತ್ಮಕ ಸಂಬಂಧ ಇತ್ತು. ಅಲ್ಲದೆ ಅಂಬಿಯನ್ನು ಕಿಚ್ಚ ಪ್ರೀತಿಯಿಂದ ಅಂಬಿ ಮಾಮ ಎಂದೇ ಕರೆಯುತ್ತಿದ್ದರು.

ಸುದೀಪ್ ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಅಂಬಿ ಜೊತೆ ತೆಗೆಸಿಕೊಂಡ ಫೋಟೋ

ಇದೆಲ್ಲದನ್ನೂ ತಿಳಿದಿದ್ದ ಅಂಬಿ ಅಭಿಮಾನಿಗಳಿಗೆ ಸುಮಲತಾ ಪರ ದರ್ಶನ್ ಹಾಗೂ ಯಶ್ ಯಾವ ರೀತಿ ಬಹಿರಂಗವಾಗಿ ಬೆಂಬಲ ನೀಡಿದ್ರೋ ಅದೇ ರೀತಿ ಕಿಚ್ಚ ಸುದೀಪ್ ಕೂಡಾ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಸುದೀಪ್ ಇದುವರೆಗೂ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಡದೆ ಇರುವುದು ಅಂಬರೀಶ್ ಅಭಿಮಾನಿಗಳಲ್ಲಿ ತೀವ್ರವಾದ ನಿರಾಸೆ ಮೂಡಿಸಿದೆ. ಆದರೆ ಏನೇ ಮಾಡಿದರೂ ಸ್ಪೆಷಲ್ ಆಗಿ ಸರ್​​​ಪ್ರೈಸ್​​​​​​​​​​​​​​​​​​​ ಕೊಡುವ ಅಭಿನಯ ಚಕ್ರವರ್ತಿ ಈ ವಿಷಯದಲ್ಲೂ ಅಂಬಿ ಅಭಿಮಾನಿಗಳಿಗೆ ಸರ್​​​ಪ್ರೈಸ್ ನೀಡಲು ಇನ್ನು ಎರಡು ದಿನಗಳೊಳಗೆ ಮಂಡ್ಯಕ್ಕೆ ಹೋಗುತ್ತಾರಾ ಎಂಬುದನ್ನು ಕಾದು ನೋಡಬೇಕು.

'ಅಂಬಿ ನಿಂಗ್​ ವಯಸ್ಸಾಯ್ತೋ' ಚಿತ್ರದ ಪೋಸ್ಟರ್‌
ಅಂಬರೀಶ್ ಜೊತೆ ಸುದೀಪ್ ಬೈಕ್ ರೈಡ್​​​​

For All Latest Updates

TAGGED:

ABOUT THE AUTHOR

...view details