ಕರ್ನಾಟಕ

karnataka

ETV Bharat / state

ಆಧುನಿಕ ಭಗೀರಥ ಕಾಮೇಗೌಡರಿಗೂ ಕೊರೊನಾ.. ಚಿಕಿತ್ಸೆಗೆ ಅಲೆಯುವಾಗಲೇ ಅಂಟಿತಾ ಸೋಂಕು? - Kamegowda

ಇತ್ತೀಚಿಗೆ ಸುದ್ದಿಯಲ್ಲಿರುವ ಕೆರೆಗಳ ನಿರ್ಮಾತೃ ಕಾಮೇಗೌಡರಿಗೆ ಕೊರೊನಾ ದೃಢವಾಗಿದೆ. ಕಾಲು ನೋವಿನಿಂದ ಆಸ್ಪತ್ರೆಗೆ ಅಲೆದಾಟ ನಡೆಸುತ್ತಿದ್ದ ವೇಳೆ ಕಾಮೇಗೌಡರಿಗೂ ಕೊರೊನಾ ಟೆಸ್ಟ್​ ಮಾಡಲಾಗಿತ್ತು..

Man of lakes  Kamegowda infected from coronavirus
ಆಧುನಿಕ ಭಗೀರಥ ಕಾಮೇಗೌಡರಿಗೂ ಕೊರೊನಾ...ಚಿಕಿತ್ಸೆಗೆ ಅಲೆಯುವಾಗಲೇ ಅಂಟಿತಾ ಸೋಂಕು..?

By

Published : Jul 22, 2020, 5:14 PM IST

ಮಂಡ್ಯ :ಅನಾರೋಗ್ಯದಿಂದ ಬಳಲುತ್ತಿದ್ದ ಕೆರೆ ಕಾಮೇಗೌಡರಿಗೆ ಕೊರೊನಾ ಸೋಂಕು ತಗುಲಿದೆ. ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಕಾಲಿನ ಚಿಕಿತ್ಸೆಗೆಂದು ಬಂದಿದ್ದ ವೇಳೆ ನಡೆಸಲಾಗಿದ್ದ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ಕಾಣಿಸಿದೆ.

ಕಾಲು ನೋವಿನ‌ ಚಿಕಿತ್ಸೆಗೆಂದು ಆಸ್ಪತ್ರೆಗೆ ಅಲೆದಾಟ ನಡೆಸುತ್ತಿದ್ದ ವೇಳೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಮಳವಳ್ಳಿ ತಾಲೂಕಿನ‌ ದಾಸನದೊಡ್ಡಿ ಗ್ರಾಮದ ಕಾಮೇಗೌಡರ‌‌ ಮನೆ ಸುತ್ತ-ಮುತ್ತ ಸೀಲ್​​​ಡೌನ್​​​ ಮಾಡಲಾಗಿದೆ.

ಇದಲ್ಲದೆ ಕೆಲವರನ್ನು ಕ್ವಾರಂಟೈನ್ ಮಾಡಿ, ಮಕ್ಕಳಿಗೂ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ABOUT THE AUTHOR

...view details