ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಮಚ್ಚಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ..! - ಮಂಡ್ಯದಲ್ಲಿ ಮಚ್ಚಿಗಾಗಿ ಕೊಲೆ

ಮಚ್ಚಿನ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮುತ್ತತ್ತಿ ಗ್ರಾಮದಲ್ಲಿ ನಡೆದಿದೆ.

Man murder in Mandya, murder for sword in Mandya, Mandya crime news, ಮಂಡ್ಯದಲ್ಲಿ ವ್ಯಕ್ತಿಯ ಕೊಲೆ, ಮಂಡ್ಯದಲ್ಲಿ ಮಚ್ಚಿಗಾಗಿ ಕೊಲೆ, ಮಂಡ್ಯ ಅಪರಾಧ ಸುದ್ದಿ,
ಮಂಡ್ಯದಲ್ಲಿ ಮಚ್ಚಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

By

Published : Jan 1, 2022, 5:51 PM IST

ಮಂಡ್ಯ: ಸೌದೆ ಕತ್ತರಿಸಲು ತೆಗೆದುಕೊಂಡಿದ್ದ‌ ಮಚ್ಚನ್ನು ವಾಪಸ್ ಕೊಡದ ಕಾರಣ ಇಬ್ಬರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಮುತ್ತತ್ತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಾಲುಮಲ್ಲನ ಪುತ್ರ ಮುತ್ತುರಾಜ್ 48 ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.

ಇಲ್ಲಿನ ನಿವಾಸಿ ಮುತ್ತುರಾಜ್​ನ ಸಂಬಂಧಿಕರೊಬ್ಬರು 5 ದಿನಗಳ ಹಿಂದೆ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರ ಮಾಡುವುದಕ್ಕೆ ಸೌದೆ ತರಲು ಮುತ್ತುರಾಜ್​ ಅದೇ ಗ್ರಾಮದ ಸಂಜೀವ ಮೂರ್ತಿ ಬಳಿ ಮಚ್ಚನ್ನು ತೆಗೆದುಕೊಂಡಿದ್ದರು. ಕೆಲವು ದಿನಗಳೇ ಕಳೆದರೂ ಮಚ್ಚನ್ನು ವಾಪಸ್​ ಕೊಟ್ಟಿರಲಿಲ್ಲ. ಮಚ್ಚನ್ನು ಮರಳಿ ನೀಡುವಂತೆ ಮುತ್ತುರಾಜ್​ಗೆ ಸಂಜೀವ್ ಮೂರ್ತಿ ಕೇಳಿದ್ದಾನೆ.

ಆದ್ರೆ ಮಚ್ಚಿನ ವಿಷಯಕ್ಕೆ ಮುತ್ತುರಾಜ್​ ಮತ್ತು ಸಂಜೀವ್​ ಮೂರ್ತಿ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದೆ. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಮುತ್ತುರಾಜನ ಹೊಟ್ಟೆಯ ಭಾಗಕ್ಕೆ ಜೋರಾಗಿ ಸಂಜೀವಮೂರ್ತಿ ಒದ್ದಿದ್ದಾನೆ. ಒದ್ದ ರಭಸಕ್ಕೆ ಮುತ್ತುರಾಜ್​ ಅಲ್ಲೇ ಕುಸಿದು ಬಿದ್ದಿದ್ದಾನೆ.

ಸ್ಥಳೀಯರು ಕೂಡಲೇ ಮುತ್ತುರಾಜ್​ನನ್ನು ಆಸ್ಪತ್ರೆಗೆ ಸೇರಿಸಲು ಕರೆದೊಯ್ದಿದ್ದರು. ಆದ್ರೆ ಮಾರ್ಗ ಮಧ್ಯದಲ್ಲಿ ಮುತ್ತುರಾಜ್​ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್, ವೃತ್ತನಿರೀಕ್ಷಕ ಧನರಾಜ್ ಭೇಟಿ ನೀಡಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ABOUT THE AUTHOR

...view details