ಕರ್ನಾಟಕ

karnataka

ETV Bharat / state

ಶೀಲ ಶಂಕಿಸಿ ಪತ್ನಿಯನ್ನು ಕೊಂದ ಪತಿ: ಅನಾಥವಾದ ಮಕ್ಕಳು! - over suspicion of affair

ಕೆ.ಆರ್.ಪೇಟೆ ತಾಲೂಕಿನ‌ಲ್ಲಿ ಹೆಂಡತಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ ಪತಿರಾಯನೊಬ್ಬ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

Man murder his wife over suspicion of affair in Mandya
ಮುನಿಯಮ್ಮ(34) ಕೊಲೆಯಾದ ದುರ್ದೈವಿ

By

Published : May 12, 2020, 8:08 PM IST

ಮಂಡ್ಯ: ಪತ್ನಿಯ ಶೀಲ ಶಂಕಿಸಿದ ಕಿರಾತಕ ಪತಿರಾಯ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ‌ ಮೂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸ್ವಾಮಿ (41) ಕೊಲೆ ‌ಮಾಡಿದ ಆರೋಪಿ

ಹಾಸನದ ರಂಗಾಪುರ ಗ್ರಾಮದ ಮುನಿಯಮ್ಮ(34) ಕೊಲೆಯಾದ ದುರ್ದೈವಿಯಾಗಿದ್ದು, ಈಕೆಯ ಪತಿ ಸ್ವಾಮಿ (41) ಕೊಲೆ ‌ಮಾಡಿದ ಆರೋಪಿಯಾಗಿದ್ದಾನೆ.

ಜಮೀನು ಗುತ್ತಿಗೆ ಪಡೆದು ಶುಂಠಿ ಬೇಸಾಯ ಮಾಡಲು ಮೂಡನಹಳ್ಳಿಗೆ ಈ ದಂಪತಿ ಬಂದಿದ್ದರು. ಆದರೆ ಪತ್ನಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಕತ್ತು ಹಿಸುಕಿ ಕೊಲೆಗೈದು ಹೇಮಾವತಿ ನಾಲೆಗೆ ಬಿಸಾಡಿದ್ದಾನೆ ಎನ್ನಲಾಗಿದೆ.

ಮುನಿಯಮ್ಮ(34) ಕೊಲೆಯಾದ ಪತ್ನಿ

ದಂಪತಿಗೆ ಎರಡು ಮಕ್ಕಳಿವೆ. ಈಗ ಪೋಷಕರು ಇಲ್ಲದೆ ಮಕ್ಕಳು ಅನಾಥವಾಗಿವೆ. ಸ್ಥಳಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details