ಮಂಡ್ಯ: ವಿವಾಹೇತರ ಸಂಬಂಧದ ಶಂಕೆ ಹಿನ್ನಲೆ ಮನೆಗೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು ಅಡುಗೆ ಭಟ್ಟನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮೊಗರಳ್ಳಿ ಮಂಟಿ ಗ್ರಾಮದಲ್ಲಿ ನಡೆದಿದೆ.
ವಿವಾಹೇತರ ಸಂಬಂಧ ಶಂಕೆ: ಶ್ರೀರಂಗಪಟ್ಟಣದಲ್ಲಿ ಅಡುಗೆ ಭಟ್ಟನ ಬರ್ಬರ ಕೊಲೆ - ವಿವಾಹೇತರ ಸಂಬಂಧ ಶಂಕೆ
ವಿವಾಹೇತರ ಸಂಬಂಧದ ಶಂಕೆ ಹಿನ್ನಲೆ ಮನೆಗೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು ಅಡುಗೆ ಭಟ್ಟನನ್ನು ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮೊಗರಳ್ಳಿ ಮಂಟಿ ಗ್ರಾಮದಲ್ಲಿ ನಡೆದಿದೆ.
crime
ನಂಜನಗೂಡು ತಾಲೂಕಿನ ಹುರ ಗ್ರಾಮದ ಉದಯ್ (39) ಕೊಲೆಗೀಡಾಗಿರುವ ಅಡುಗೆ ಭಟ್ಟ. ಚಾಕು ಇರಿತಕ್ಕೊಳಗಾಗಿದ್ದ ಉದಯ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವಿಗೀಡಾಗಿದ್ದಾನೆ.
ಅಡುಗೆ ಭಟ್ಟನ ಕೆಲಸ ಮಾಡಿಕೊಂಡು ವಾಸವಿದ್ದ ಉದಯ್ ಮನೆಗೆ ಏಕಾಏಕಿ ಮೂವರು ದುಷ್ಕರ್ಮಿಗಳು ನುಗ್ಗಿ, ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.