ಕರ್ನಾಟಕ

karnataka

ETV Bharat / state

ಸೊಸೆಯೊಂದಿಗೆ ಅನೈತಿಕ ಸಂಬಂಧ ಪ್ರಶ್ನಿಸಿದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಪಾಪಿ - ಪ್ರಶ್ನಿಸಿದ ಮಹಿಳೆಯನ್ನೇ ಕೊಚ್ಚಿ ಕೊಲೆಗೈದ ಪಾಪಿ

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಇದನ್ನು ಪ್ರಶ್ನೆ ಮಾಡಿದ ಮಹಿಳೆಯನ್ನು ಆತ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.

ಮಂಡ್ಯದಲ್ಲಿ ಮಹಿಳೆ ಕೊಲೆ
Women murder in Mandya

By

Published : Mar 17, 2021, 11:50 AM IST

ಮಂಡ್ಯ:ಸೊಸೆಯೊಂದಿಗಿನ ಅನೈತಿಕ ಸಂಬಂಧ ಪ್ರಶ್ನಿಸಿದ ಮಹಿಳೆಯನ್ನೇ ವ್ಯಕ್ತಿಯೊಬ್ಬ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ‌ ನಡೆದಿದೆ.

ದೊಡ್ಡತಾಯಮ್ಮ (55) ಕೊಲೆಯಾದ ದುರ್ದೈವಿ. ಹುಣಸನಹಳ್ಳಿ ಗ್ರಾಮದ ವಾಸು (30) ಕೊಲೆ ಮಾಡಿದ ಆರೋಪಿ. ಮೃತ ಮಹಿಳೆಯ ಸೊಸೆಯೊಂದಿಗೆ ಆರೋಪಿ ಅನೈತಿಕ ಸಂಬಂಧ ಹೊಂದಿದ್ದನು. ಅನೈತಿಕ ಸಂಬಂಧ ಇಟ್ಟುಕೊಳ್ಳದಂತೆ ಬುದ್ಧಿವಾದ ಹೇಳಲು ಬಂದ ಮಹಿಳೆಯನ್ನೇ ಪಾಪಿ ಕೊಲೆಗೈದು ಪರಾರಿಯಾಗಿದ್ದಾನೆ.

ಓದಿ: ಹಾವೇರಿ: ಬಸ್​ ನಿಲ್ದಾಣದ ಬಳಿ ಇಬ್ಬರ ಬರ್ಬರ ಹತ್ಯೆ

ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಅಶ್ವಿನಿ ಭೇಟಿ ಪರಿಶೀಲನೆ ನಡೆಸಿದ್ದು, ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details