ಮಂಡ್ಯ: ಬೈಕ್ಗೆ ಬೊಲೆರೊ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ತೆರೀಕೆರೆ ಕಾಲೋನಿ ಬಳಿ ನಡೆದಿದೆ.
ಬೆಕ್ಕಳಲೆ ಗ್ರಾಮದ ಚಂದ್ರ (28) ಮೃತ ದುರ್ದೈವಿ. ಇಂದು ತನ್ನ ತಂಗಿಯ ಮದುವೆಗೆ ಕಲ್ಯಾಣ ಮಂಟಪದಲ್ಲಿ ವಿವಾಹಕ್ಕೆ ಬೇಕಾದ ಪದಾರ್ಥಗಳನ್ನು ಇಟ್ಟು ಗ್ರಾಮಕ್ಕೆ ವಾಪಸ್ ಆಗುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಕೌಡ್ಲೆಯಿಂದ ಕೊಪ್ಪ ಕಡೆ ಬರುತ್ತಿದ್ದ ಬೊಲೆರೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತನ್ನ ತಂಗಿ ಮದುವೆ ಅದ್ದೂರಿಯಾಗಿ ಮಾಡಬೇಕಿದ್ಧ ಈತ ಮದುವೆಗೂ ಮೊದಲೇ ಕಣ್ಮುಚಿದ್ದರಿಂದ ತಂಗಿ ಮದುವೆ ನಿಂತುಹೋಗಿದೆ.
ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:2ನೇ ಕೋವಿಡ್ ಅಲೆಯಲ್ಲಿ ಭಾರತ: ಮೊಟ್ಟ ಮೊದಲ ಬಾರಿಗೆ ಒಂದೇ ದಿನ 1 ಲಕ್ಷ ಕೇಸ್ ದಾಖಲು!