ಮಂಡ್ಯ:ಎತ್ತಿನ ಗಾಡಿ ಸಮೇತ ಜಾನುವಾರು ತೊಳೆಯಲು ಹೋದ ಯುವಕ ನೀರುಪಾಲಾದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯ ಕೊಪ್ಪಲಿನ ಲೋಕಪಾವನಿ ನದಿಯಲ್ಲಿ ನಡೆದಿದೆ.
ಜಾನುವಾರು ತೊಳೆಯಲು ಹೋಗಿ ಯುವಕ ನೀರು ಪಾಲು - ಜಾನುವಾರು ತೊಳೆಯಲು ಹೋಗಿ ಯುವಕ ನೀರು ಪಾಲು
ಜಾನುವಾರು ತೊಳೆಯಲು ಹೋದ ಯುವಕ ಎತ್ತಿನಗಾಡಿ ಸಮೇತ ನೀರು ಪಾಲಾದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯ ಕೊಪ್ಪಲಿನ ಲೋಕಪಾವನಿ ನದಿಯಲ್ಲಿ ನಡೆದಿದೆ.
ಜಾನುವಾರು ತೊಳೆಯಲು ಹೋಗಿ ಯುವಕ ನೀರು ಪಾಲು
ಬಾಬುರಾಯನ ಕೊಪ್ಪಲು ಗ್ರಾಮದ ಸೋಮ (21) ನದಿಯಲ್ಲಿ ಕೊಚ್ಚಿಹೋದ ಯುವಕ. ಸ್ನೇಹಿತನ ಜೊತೆ ಜಾನುವಾರು ತೊಳೆಯಲು ನದಿಗೆ ಬಂದಿದ್ದಾಗ ಘಟನೆ ನಡೆದಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ನದಿ ತುಂಬಿ ಹರಿಯುತ್ತಿದ್ದು, ಜಾನುವಾರು ತೊಳೆಯುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಆತನ ಜೊತೆ ಇದ್ದ ಮತ್ತೋರ್ವ ಪಾರಾಗಿದ್ದು, ಕೊಚ್ಚಿ ಹೋದ ಯುವಕನ ಶವಕ್ಕಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಶ್ರೀರಂಗಪಟ್ಟಣ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.