ಮಂಡ್ಯ: ಕಾರುಗಳನ್ನು ಬಾಡಿಗೆಗೆ ಪಡೆದು ನಂತರ ನಂಬರ್ ಪ್ಲೇಟ್ ಬದಲಿಸಿ, ಬೇರೆಯವರಲ್ಲಿ ಅಡಮಾನವಿಟ್ಟು ಹಣ ಪಡೆಯುತ್ತಿದ್ದ ಆರೋಪಿಯನ್ನು ಹಲಗೂರು ಠಾಣೆ ಪೋಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಬಂಧಿತ. ಕಾರುಗಳನ್ನು ಬಾಡಿಗೆಗೆ ಪಡೆದು ನಂತರ ಕಾರಿನ ಮಾಲೀಕರಿಗೆ ಗೊತ್ತಾಗದಂತೆ ಕಾರು ನಂಬರ್ ಪ್ಲೇಟ್ ಬದಲಿಸುತ್ತಿದ್ದ ಈತ ಅಡಮಾನವಿಟ್ಟು ಹಣ ಪಡೆಯುತ್ತಿದ್ದ. ಈ ಕುರಿತು ಮಳವಳ್ಳಿ ತಾಲ್ಲೂಕಿನ ಹಲಗೂರು ಠಾಣೆಯಲ್ಲಿ ಸೆ.15 ರಂದು ಪುನೀತ್ ಗೌಡ ಎಂಬುವವರು ದೂರು ನೀಡಿದ್ದರು.
ವಿಚಾರಣೆಯ ವೇಳೆ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾಲೀಕರಿಂದ ಕರಾರು ಒಪ್ಪಂದದ ಮೂಲಕ ಕಾರುಗಳನ್ನು ಬಾಡಿಗೆಗೆ ಪಡೆದು ಅನುಮತಿಯಿಲ್ಲದೆ ಬಣ್ಣ, ನಂಬರ್ ಪ್ಲೇಟ್ ಬದಲಾಯಿಸಿ ಬೇರೆಯವರಿಗೆ ಅಡಮಾನವಿಟ್ಟು ಹಣ ಪಡೆಯುತ್ತಿದ್ದ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ.
ಬಾಡಿಗೆ ಕಾರುಗಳ ನಂಬರ್ ಪ್ಲೇಟ್ ಬದಲಿಸಿ ವಂಚನೆ ಬಂಧಿತನಿಂದ ಸ್ವಿಫ್ಟ್ ಡಿಸೈರ್, ಇಂಡಿಕಾ, ಇನೋವಾ, ರಿಟ್ಜ್, ಟವೇರಾ, ಕ್ಸಿಡ್, ಮಹೇಂದ್ರ ಕೆಯುವಿ, ಸೆಲೇರಿಯೋ, ಮಾರುತಿ ಆಲ್ಲೊ ಸೇರಿ ಒಟ್ಟು 19 ಕಾರುಗಳನ್ನು ಮತ್ತು ಒಂದು ಅಶೋಕ ಲೈಲ್ಯಾಂಡ್ ಮಿನಿ ಗೂಡ್ಸ್ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇವುಗಳ ಅಂದಾಜು ಮೌಲ್ಯ ಒಂದು ಕೋಟಿ ರೂ. ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕಾರು ಕಳ್ಳತನ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ