ಮಂಡ್ಯ:ಹಿತ್ತಲಗಿಡ ಮದ್ದಲ್ಲ ಎಂಬ ಮಾತಿದೆ. ಆದರೆ, ಅದೇ ಹಿತ್ತಲದ ಬೇಲಿಯೊಳಗೆ ಬೆಳೆಯುವಔಷಧಿ ಗುಣವುಳ್ಳಪುಂಡಿಯಿಂದಲೇಮಳವಳ್ಳಿ ತಾಲೂಕಿನ ಪ್ರತಿಪರ ರೈತರೊಬ್ಬರು ಹೆಚ್ಚು ಆದಾಯ ಗಳಿಸುವ ಮಾರ್ಗ ಕಂಡುಕೊಂಡಿದ್ದಾರೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಸಯ್ಯದ್ ಘನಿ ಖಾನ್ ಎಂಬ ರೈತ ಬೇಲಿಯಲ್ಲಿ ಬೆಳೆಯುವ ಔಷಧೀಯ ಗುಣವುಳ್ಳ, ಪೋಷಕಾಂಶಗಳನ್ನ ಹೊಂದಿರುವ ಪುಂಡಿ ಗಿಡದ ಕೃಷಿಗೆ ಮುಂದಾಗಿದ್ದಾರೆ. ಸಾಮಾನ್ಯವಾಗಿ ಈ ಗಿಡ ಬೇಲಿ, ಹೊಲ, ಗದ್ದೆಗಳಲ್ಲಿ ಕಂಡು ಬರುತ್ತದೆ.
ಮೂರು ವಿಧವಾಗಿದ್ದು, ಇದನ್ನು ಆಂಗ್ಲಭಾಷೆಯಲ್ಲಿ ರೋಸಿಲ್ಲಾ ಎಂದು ಕರೆಯಲಾಗುತ್ತದೆ. ಇದೀಗ ಈ ಗಿಡವನ್ನು ಕೃಷಿ ಮಾದರಿಯಲ್ಲಿ ಬೆಳೆದು ವಾಣಿಜ್ಯ ಬೆಳೆಯಾನ್ನಾಗಿಸಲು ಈ ರೈತ ಪ್ರಯತ್ನಿಸುತ್ತಿದ್ದಾರೆ.
ಹಿತ್ತಲ ಗಿಡ ಮದ್ದೂ ಹೌದು, ಕೈತುಂಬ ಮನಿಯೂ ತರುವುದು.. 'ಪುಂಡಿ' ಬೆಳೆದ ಮಳವಳ್ಳಿ ರೈತ ಪವರ್‌ಫುಲ್ ಓದಿ: ಕೌಟುಂಬಿಕ ಕಲಹ; ತಾಯಿ - ಸಹೋದರಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆ
ಇದಕ್ಕಾಗಿ ರೈತ ಸಯ್ಯದ್, ಸುಮಾರು 8 ಎಕರೆ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ರೋಸಿಲಾ ಗಿಡ ವಿಟಮಿನ್ ಸಿ, ಪ್ರೋಟಿನ್, ಮೆಗ್ನೀಷಿಯಂ, ಪಾಸ್ಪರಸ್, ಐರಾನ್, ಸೋಡಿಯಂ, ಕಾರ್ಬೋಹೈಡ್ರೇಟ್ ಸೇರಿ ಅಪಾರ ಪ್ರಮಾಣದ ಲವಣಗಳನ್ನು ಒಳಗೊಂಡಿದೆ. ಇದರಲ್ಲಿ ಸಿ ವಿಟಮಿನ್ ಹೆಚ್ಚಿಗೆ ಇರುವುದರಿಂದ ಇದರ ಎಲೆಗಳು ಕೊರೊನಾ ಕಾಯಿಲೆಗೂ ಔಷಧವಾಗಿ ಬಳಸಬಹುದು ಎಂದೇಳುತ್ತಾರೆ ರೈತ ಸಯ್ಯದ್.
ಈ ಸಸ್ಯದ ಪ್ರತಿ ಭಾಗವೂ ಉಪಯೋಗಕಾರಿಯಾಗಿದೆ. ಆಹಾರದ ವಸ್ತುವಾಗಿ ಬಳಸಬಹುದು. ಇದರ ಎಲೆಯಿಂದ ಚಟ್ನಿ, ಹೂವಿನ ಎಳಸಿನಿಂದ ಜ್ಯಾಮ್, ಉಪ್ಪಿನಕಾಯಿ ಹಾಗೂ ಟೀ ಫೌಡರ್ ಮಾಡಲಾಗುತ್ತಿದೆ. ಬೀಜಗಳಿಂದ ಪೌಡರ್ ಮಾಡಿ ಆಹಾರದ ವಸ್ತುವಾಗಿ ಬಳಸಲಾಗುತ್ತಿದೆ.
ಇವರ ಮನೆಗೆ ಅತಿಥಿಗಳು ಬಂದರೆ ಪುಂಡೆ ಹೂವಿನ ಟೀ ಮೂಲಕ ಸ್ವಾಗತ ಮಾಡಲಾಗುತ್ತದೆ. ಸ್ವಲ್ಪ ಹುಳಿ ಗುಣ ಹೊಂದಿರುವುದರಿಂದ ಟೋಮ್ಯಾಟೊ ಬದಲು ಸಾಂಬಾರಿನ ಪದಾರ್ಥವಾಗಿ ಬಳಸಬಹುದಾಗಿದೆ ಎನ್ನುತ್ತಾರೆ ರೈತನ ಪತ್ನಿ ಸಯ್ಯದ್ ಫಿರ್ದೋಸ್.