ಮಂಡ್ಯ: 'ಅಲ್ಲಾಹು ಅಕ್ಬರ್' ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಮಹಾರಾಷ್ಟ್ರ ರಾಜ್ಯದ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೀಶನ್ ಸಿದ್ದಿಕ್ ಭೇಟಿ ನೀಡಿದ್ದಾರೆ. ಹಿಜಾಬ್-ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದ ಶಾಸಕ, ಮುಸ್ಕಾನ್ಗೆ ಐಫೋನ್, ಸ್ಮಾರ್ಟ್ ವಾಚ್ ಉಡುಗೊರೆ ನೀಡಿದರು.
ಕೇಸರಿ ಶಾಲು ಧರಿಸಿದ್ದ ನೂರಾರು ವಿದ್ಯಾರ್ಥಿಗಳ ಮುಂದೆ ವಿದ್ಯಾರ್ಥಿನಿ ಮುಸ್ಕಾನ್ ಧಾರ್ಮಿಕ ಘೋಷಣೆ ಕೂಗಿದ್ದರು. ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುಸ್ಕಾನ್ ನಿವಾಸಕ್ಕೆ ಭೇಟಿ ಕೊಟ್ಟ ಶಾಸಕ ಜೀಶನ್ ಸಿದ್ದಿಕ್ ಕುಟುಂಬಸ್ಥರಿಗೆ ಧೈರ್ಯ ಹೇಳಿ, ಅವರ ಜೊತೆ ಇರುವ ಭರವಸೆ ನೀಡಿದರು.