ಮಂಡ್ಯಮೇಲುಕೋಟೆಗೆ ಆಗಮಿಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ದೇವರ ದರ್ಶನ ಪಡೆದಿದ್ದಾರೆ. ದೇಶದ ಎಲ್ಲರಿಗೂ ದೀಪಾವಳಿ ಶುಭಾಶಯ ಹೇಳಿದ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಈ ಸುಸಂಧರ್ಭದಲ್ಲಿ ನಾನು ಮೇಲುಕೋಟೆ ದೇವರ ದರ್ಶನ ಪಡೆದಿದ್ದೇನೆ.
ನಾನು ದೇಶದ ಮತ್ತು ಮಧ್ಯಪ್ರದೇಶದ ಜನರಿಗೆ ಒಳ್ಳೆಯದನ್ನು ಮಾಡುವಂತೆ ಪ್ರಾರ್ಥನೆ ಮಾಡಿದ್ದೇನೆ ಎಂದರು. ನಮ್ಮ ದೇಶದ ಪ್ರಧಾನಮಂತ್ರಿ ಆತ್ಮನಿರ್ಭರ ಸಂಕಲ್ಪ ಮಾಡಿದ್ದಾರೆ. ಆ ಸಂಕಲ್ಪ ಮಾಡಲು ಎಲ್ಲಾ ಪ್ರದೇಶಗಳಲ್ಲಿ ಆತ್ಮ ನಿರ್ಭರ ಮಾಡಬೇಕಿದೆ. ಈ ಸಂಕಲ್ಪಕ್ಕಾಗಿ ಮಧ್ಯಪ್ರದೇಶದ ಜನರು ಕೂಡ ಸೇರಿ ಕೈಜೋಡಿಸುತ್ತೇವೆ ಎಂದು ತಿಳಿಸಿದರು.