ಕರ್ನಾಟಕ

karnataka

By

Published : Feb 9, 2022, 6:13 PM IST

ETV Bharat / state

ಐವರ ಭೀಕರ ಹತ್ಯೆ ಪ್ರಕರಣ: ಕೊಲೆಯಾದ ಮಹಿಳೆ ಪತಿ ಹೇಳಿದ್ದೇನು?

ಮಂಡ್ಯದಲ್ಲಿ ನಡೆದ ಐವರು ಕೊಲೆ ಪ್ರಕರಣವನ್ನು ತನಿಖೆ ನಡೆಸಿರುವ ಪೊಲೀಸರು, ಹಂತಕಿ ಲಕ್ಷ್ಮಿಯನ್ನು ಬಂಧಿಸಿದ್ದಾರೆ. ಕೇಸ್​ ಸಂಬಂಧ ಕೊಲೆಯಾದ ಮಹಿಳೆ ಪತಿ ಹೇಳಿಕೆ ನೀಡಿದ್ದಾರೆ.

Madhya five people murder case updates
ಮಂಡ್ಯ ಐವರ ಹತ್ಯೆ ಕುರಿತಂತೆ ಪತಿ ಗಂಗಾರಾಮ್ ಹೇಳಿಕೆ

ಮಂಡ್ಯ:ಸಕ್ಕರೆ ನಾಡು ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ, ನಾಲ್ವರು ಮಕ್ಕಳನ್ನು ಕೊಂದಿದ್ದ ಹಂತಕಿ ಲಕ್ಷ್ಮಿಯನ್ನು ಜಿಲ್ಲೆಯ ಕೆಆರ್‌ಎಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಕುರಿತಂತೆ ಕೊಲೆಯಾದ ಮಹಿಳೆಯ ಪತಿ ಗಂಗಾರಾಮ್ ಹೇಳಿಕೆ ನೀಡಿದ್ದಾರೆ.

ಕೊಲೆಯಾದ ಮಹಿಳೆಯ ಪತಿ ಹೇಳಿಕೆ

ಅಪರಿಚಿತ ನಂಬರ್‌ನಿಂದ ನನಗೆ, ನನ್ನ ಪತ್ನಿಗೆ ಟಾರ್ಚರ್ ಕಾಲ್ ಬರುತ್ತಿತ್ತು. ಅದು ಲಕ್ಷ್ಮಿಯೇ ಅನ್ನೋದು ನನಗೆ ಗೊತ್ತಿರಲಿಲ್ಲ. ನಾನು ನನ್ನ ಹೆಂಡತಿ- ಮಕ್ಕಳೊಂದಿಗೆ ಚೆನ್ನಾಗಿದ್ದೆ. ಐವರನ್ನೂ ಯಾಕೆ ಕೊಲೆ ಮಾಡಿದಳೋ ಗೊತ್ತಿಲ್ಲ. ಪೋನ್ ಬಂದಾಗ ನಾನು ಮನೆಯವರಿಗೆಲ್ಲ ಹೇಳುತ್ತಿದ್ದೆ. ಓಪನ್ ಸ್ಪೀಕರ್‌ ಹಾಕಿ ಎಲ್ಲರಿಗೂ ಗೊತ್ತಾಗುವಂತೆಯೇ ಮಾತನಾಡುತ್ತಿದ್ದೆ.

ಅವಳು ಯಾಕೆ ಕೊಲೆ ಮಾಡಿದಳೋ ಗೊತ್ತಿಲ್ಲ. ಇದರಲ್ಲಿ ನನಗೆ ಯಾವುದೇ ಇನ್‌ವಾಲ್‌ಮೆಂಟ್ ಇಲ್ಲ. ತನಿಖೆ ಆಗಲಿ, ನನ್ನದು ತಪ್ಪಿದ್ದರೆ ನನಗೂ ಶಿಕ್ಷೆ ಆಗಲಿ ಎಂದು ಮೃತ ಲಕ್ಷ್ಮಿ ಪತ್ನಿ ಗಂಗಾರಾಮ್ ಹೇಳಿಕೆ ನೀಡಿದ್ದಾರೆ‌.

ಫೆ.6ರಂದು ಕೆಆರ್‌ಎಸ್‌ ಗ್ರಾಮದಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ನಾಲ್ವರು ಮಕ್ಕಳು, ಮಹಿಳೆಯನ್ನು ಹತ್ಯೆ ಮಾಡಲಾಗಿತ್ತು. ಲಕ್ಷ್ಮೀ(26), ರಾಜ್(12), ಕೋಮಲ್(7), ಕುನಾಲ್(4), ಗೋವಿಂದ(8) ಕೊಲೆಯಾದವರು. ಸದ್ಯ ಪೊಲೀಸರು ಹಂತಕಿ ಸೇರಿ ಐವರನ್ನು ಅರೆಸ್ಟ್ ಮಾಡಿದ್ದಾರೆ.

ಕೊಲೆ ಪ್ರಕರಣ ಬೇದಿಸಿದ ಪೊಲೀಸರಿಗೆ ಎಸ್ಪಿ ಮೆಚ್ಚುಗೆ

ಆರೋಪಿ ಲಕ್ಷ್ಮಿ ಕೊಲೆಯಾಗಿರುವ ಮಹಿಳೆಯ ಗಂಡ ಗಂಗಾರಾಮ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಹೀಗಾಗಿ ಮಹಿಳೆ ಮತ್ತು ಮಕ್ಕಳನ್ನು ಕೊಂದರೆ ಗಂಗಾರಾಮ್ ಜೊತೆ ಸಂಸಾರ ಮಾಡಬಹುದು ಎಂಬ ಉದ್ದೇಶದಿಂದ ದುಷ್ಕೃತ್ಯ ಎಸಗಿದ್ದಾಳೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ: ಮಂಡ್ಯ: ಐವರ ಭೀಕರ ಹತ್ಯೆ ನಡೆದ ಎರಡೇ ದಿನಗಳಲ್ಲಿ ಕೊಲೆಗಾತಿ ಅರೆಸ್ಟ್​

ABOUT THE AUTHOR

...view details