ಕರ್ನಾಟಕ

karnataka

ETV Bharat / state

ಮದ್ದೂರು: ವಿಷಯುಕ್ತ ನೀರು ಕುಡಿದು 6 ಕುರಿಗಳು ಸಾವು - Somanahalli Industrial Area

ಕುರಿ ಕಳೆದುಕೊಂಡು ಕಂಗಾಲಾಗಿರುವ ಕುರಿಗಾಹಿಗೆ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ..

Madduru: 6 sheep killed by drinking poisoned water
ಮದ್ದೂರು: ವಿಷಯುಕ್ತ ನೀರು ಕುಡಿದು 6 ಕುರಿಗಳು ಸಾವು

By

Published : Jun 24, 2020, 4:44 PM IST

ಮಂಡ್ಯ :ಕಾರ್ಖಾನೆಯಿಂದ ಬಿಡುಗಡೆ ಮಾಡುತ್ತಿದ್ದ ವಿಷಯುಕ್ತ ನೀರು ಕುಡಿದು 6 ಕುರಿಗಳು ಸಾವಿಗೀಡಾಗಿರುವ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ವಿಷಯುಕ್ತ ನೀರು ಕುಡಿದು 6 ಕುರಿಗಳ ಸಾವು

ರುದ್ರಾಕ್ಷಿಪುರದ ಕುರಿಗಾಹಿ ಪುಟ್ಟಸ್ವಾಮಿ ಎಂಬುವರಿಗೆ ಸೇರಿದ ಸುಮಾರು 70 ಸಾವಿರ ಬೆಲೆ ಬಾಳುವ ಕುರಿಗಳು ಸಾವಿಗೀಡಾಗಿದ್ದು, ಮೇಯಿಸಲು ಬಿಟ್ಟಿದ್ದಾಗ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ವಿಷಯುಕ್ತ ನೀರು ಕುಡಿದು ಸಾವಿಗೀಡಾಗಿವೆ ಎಂದು ತಿಳಿದು ಬಂದಿದೆ. ಕುರಿ ಕಳೆದುಕೊಂಡು ಕಂಗಾಲಾಗಿರುವ ಕುರಿಗಾಹಿಗೆ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಇಲ್ಲಿ ಹಲವು ಕಾರ್ಖಾನೆಗಳು ವಿಷಯುಕ್ತ ನೀರನ್ನು ಹಾಗೆಯೇ ನೀರಿನ ಮೂಲಗಳಿಗೆ ಬಿಡುತ್ತಿದೆ. ಅದನ್ನು ಕುಡಿದು ಈವರೆಗೂ ಹಲವಾರು ಜಾನುವಾರುಗಳು ಸಾವಿಗೀಡಾಗಿವೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ABOUT THE AUTHOR

...view details