ಮಂಡ್ಯ: ನನ್ನ ಸಿನಿಮಾ ಬಿಡುಗಡೆಯಾದಾಗ ಪುನೀತ್ ಮಾಮಾ ವಿಶ್ ಮಾಡುತ್ತಿದ್ದರು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ನಟ ಶ್ರೀಮುರುಳಿ ಹೇಳಿದರು.
ಪುನೀತ್ ರಾಜ್ ಕುಮಾರ್ ನೆನೆದ ನಟ ಶ್ರೀಮುರುಳಿ.. ಇಂದು ಮಂಡ್ಯದಲ್ಲಿ ಮದಗಜ ಚಿತ್ರತಂಡ ವಿಜಯಯಾತ್ರೆ ನಡೆಸಿತು. ಈ ವೇಳೆ ಮಾತನಾಡಿದ ಅವರು, ಇದು ವಿಜಯಯಾತ್ರೆ ಅಲ್ಲ. ಅಭಿಮಾನಿಗಳ ದರ್ಶನ. ಅಭಿಮಾನಿಗಳು ದರ್ಶನ ಕೊಟ್ಟಷ್ಟು ನಮಗೆ ನೆಮ್ಮದಿ.
ಒಮಿಕ್ರಾನ್ ಸಮಯದಲ್ಲೂ ಜನರು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ವ್ಯಾಕ್ಸಿನ್ ಪಡೆದು ಜನರು ಸಿನಿಮಾ ನೋಡುತ್ತಿದ್ದಾರೆ. ಅಭಿಮಾನಿ ದೇವರುಗಳು ನಮಗೆ ಏನು ಕೊಟ್ಟರು ತೃಪ್ತಿ ಇದೆ. ಪುನೀತ್ ನಮ್ಮ ಜೊತೆ ಇದ್ದಾರೆ. ನಮಗೆ ಅವರ ಆಶೀರ್ವಾದ ಸದಾ ಇದೆ ಎಂದರು.
ಮಂಡ್ಯದಲ್ಲಿ ನಡೆದ ಮದಗಜ ವಿಜಯಯಾತ್ರೆ.. ನಾವು ಅವರನ್ನು ಯಾವುತ್ತೂ ಮರೆಯಲು ಸಾಧ್ಯವಿಲ್ಲ.ನಮ್ಮ ಸುತ್ತಲೂ ಪುನೀತ್ ರಾಜ್‍ಕುಮಾರ್ ಇದ್ದಾರೆ. ಅವರೇ ನಮ್ಮ ಶಕ್ತಿ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಸಿನಿಮಾ ವಿಶೇಷವಾಗಿದೆ. ಎಲ್ಲರೂ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ.
ಮಂಡ್ಯ ಅಂದರೆ ಇಲ್ಲಿನ ಖದರ್ ಬೇರೆ, ಇಲ್ಲಿನ ಅಭಿಮಾನಿಗಳ ರೀತಿನೆ ಬೇರೆ. ಒಳ್ಳೆಯ ಕಲೆಕ್ಷನ್ ಕೂಡ ಆಗ್ತಿದೆ. ಮಂಡ್ಯದಲ್ಲಿ ಅತಿ ಹೆಚ್ಚು ಸಿನಿಮಾ ಕಲೆಕ್ಷನ್ ಆಗಿದೆ ಎಂದರು.
ಪುನೀತ್ ಸರ್ ಜೊತೆ ನಟಿಸಬೇಕು ಅನ್ಕೊಂಡಿದ್ದೆ:ಬಳಿಕ ನಟ ಗರುಡ ರಾಮ್ ಮಾತನಾಡಿ, ಮದಗಜ ಸಿನಿಮಾ ಫ್ಯಾಮಿಲಿ ಕೂತು ನೋಡುವ ಸಿನಿಮಾ. ಇವತ್ತು ಅಭಿಮಾನಿಗಳ ದರ್ಶನ ಪಡೆದು ಕೃತಜ್ಞತೆ ಸಲ್ಲಿಸಲು ಬಂದಿದ್ದೇವೆ. ನನ್ನನ್ನು ನೋಡಿ ಮಕ್ಕಳು ಹೆದರುವುದಿಲ್ಲ, ಖುಷಿ ಪಟ್ಟಿದ್ದಾರೆ.
ಪುನೀತ್ ಸರ್ ಜೊತೆ ನಟನೆ ಮಾಡಬೇಕು ಎಂಬ ಆಸೆ ಇತ್ತು. ನಾನು ನತದೃಷ್ಟ. ನನ್ನ ಜೊತೆ ತುಂಬಾ ಆತ್ಮೀಯವಾಗಿದ್ದರು. ಅವರು ತುಂಬಾ ಸರಳಜೀವಿ, ಎಲ್ಲರನ್ನೂ ಪ್ರೀತಿಸುವ ಅಪ್ಪು ಇವತ್ತು ನಮ್ಮ ಜೊತೆ ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: ಕೃಷಿಕನ ಕಲ್ಯಾಣ! ಅನ್ನದಾತನನ್ನೇ ಅಳಿಯನನ್ನಾಗಿಸಿಕೊಂಡ ರೈತ ಮುಖಂಡ.. ಅಪರೂಪದ ವಚನ ಮಾಂಗಲ್ಯ..