ಕರ್ನಾಟಕ

karnataka

ETV Bharat / state

ಬಾಲಕನ ಹತ್ಯೆ ಪ್ರಕರಣ ಮಾಸುವ ಮುನ್ನವೇ ನೇಣಿಗೆ ಶರಣಾದ ಬಾಲಕಿ - ಅಪ್ರಾಪ್ತರ ಪ್ರೀತಿ, ಬಾಲಕನ ಹತ್ಯೆ ಪ್ರಕರಣ

4 ತಿಂಗಳಿನಿಂದ ಪೋಷಕರನ್ನು ನೋಡದೇ ಬಾಲಕಿಗೆ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಲಾಗಿದ್ದು, ಖಿನ್ನತೆಯಿಂದ ಬಾಲಕಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಅಲ್ಲದೇ ಡೆತ್‌‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಶಂಕೆ..? ವ್ಯಕ್ತವಾಗಿದೆ.

ನೇಣಿಗೆ ಶರಣಾದ ಬಾಲಕಿ
ನೇಣಿಗೆ ಶರಣಾದ ಬಾಲಕಿ

By

Published : Aug 31, 2021, 5:11 PM IST

ಮಂಡ್ಯ : ಇತ್ತೀಚಿಗೆ ಜಿಲ್ಲೆಯ ಕಲ್ಲಹಳ್ಳಿಯಲ್ಲಿ ನಡೆದ ಅಪ್ರಾಪ್ತರ ಪ್ರೀತಿ, ಬಾಲಕನ ಹತ್ಯೆ ಪ್ರಕರಣದ ನಂತರ ಬಾಲಮಂದಿರದಲ್ಲಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಪ್ರಾಪ್ತ ಮತ್ತು ಬಾಲಕಿ ಪ್ರೀತಿಸಿದ ವಿಷಯ ತಿಳಿದು ಬಾಲಕಿಯ ಪೋಷಕರು ಬಾಲಕನನ್ನು ಏಪ್ರಿಲ್ 15ರಂದು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಬಾಲಕಿ ತಂದೆ ಶಿವಲಿಂಗು ಸೇರಿ 17 ಜನರ ವಿರುದ್ಧ ದೂರು ದಾಖಲಾಗಿತ್ತು. ಮಂಡ್ಯ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಶಿವಲಿಂಗು ಕೊಲೆ ಆರೋಪದಡಿ ಜೈಲಿನಲ್ಲಿದ್ದರು. ಪೋಷಕರು ಜೈಲು ಸೇರಿದ್ದ ಬಳಿಕ , ಬಾಲಕಿಗೆ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿತ್ತು.

4 ತಿಂಗಳಿನಿಂದ ಪೋಷಕರನ್ನು ನೋಡದೇ ಬಾಲಕಿ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಲಾಗಿದ್ದು, ಖಿನ್ನತೆಯಿಂದ ಬಾಲಕಿ ನೇಣಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೇ ಡೆತ್‌‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಶಂಕೆ..? ವ್ಯಕ್ತವಾಗಿದೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಓದುವ ವಯಸ್ಸಿನಲ್ಲಿ ಪ್ರೀತಿ ಬೇಡ ಅಂದ ಪೋಷಕರು.. ನೆಲಮಂಗಲದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ABOUT THE AUTHOR

...view details