ಮಂಡ್ಯ: ಕೊರೊನಾ ಸಂಕಷ್ಟದಲ್ಲಿ ನಲುಗಿರುವ ಜಿಲ್ಲೆಯ ಪತ್ರಕರ್ತರಿಗೆ ಉದ್ಯಮಿಯೊಬ್ಬರು ಸಹಾಯ ಹಸ್ತ ಚಾಚಿದ್ದಾರೆ. ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ರೇವಣ್ಣ ಆಹಾರ ಕಿಟ್ ನೀಡುವ ಮೂಲಕ ಸಹಾಯ ಮಾಡಿದ್ದಾರೆ.
ಮಂಡ್ಯ: ಪತ್ರಕರ್ತರಿಗೆ ಆಹಾರದ ಕಿಟ್ ನೀಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ - ಪತ್ರಕರ್ತರಿಗೆ ಆಹಾರದ ಕಿಟ್ ನೀಡಿದ ಲಾರಿ ಮಾಲೀಕ
ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ರೇವಣ್ಣ ಜಿಲ್ಲೆಯ 200ಕ್ಕೂ ಹೆಚ್ಚು ಪತ್ರಕರ್ತರಿಗೆ ಆಹಾರ ಕಿಟ್ ನೀಡಿ ಸಹಾಯ ಮಾಡಿದರು.
ಪತ್ರಕರ್ತರಿಗೆ ಆಹಾರದ ಕಿಟ್ ನೀಡಿದ ಲಾರಿ ಮಾಲೀಕ
ಜಿಲ್ಲಾ ಪತ್ರಕರ್ತರ ಸಂಘದ ಮೂಲಕ ಆಹಾರ ಸಾಮಗ್ರಿ ನೀಡಲಾಗಿದ್ದು, ಪತ್ರಕರ್ತರಿಗೆ ಒಂದು ಮೂಟೆ ಅಕ್ಕಿ ಸೇರಿದಂತೆ ಇನ್ನಿತರೆ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಿದರು.
ಪತ್ರಕರ್ತರು ಕೊರೊನಾ ಸಮಯದಲ್ಲೂ ಎದೆಗುಂದದೇ ಕೆಲಸ ನಿರ್ವಹಣೆ ಮಾಡುತ್ತಿದ್ದು, ಆಹಾರ ಸಾಮಗ್ರಿಗಳ ಸಮಸ್ಯೆ ತಲೆ ದೋರಿತ್ತು. ಹೀಗಾಗಿ ಉದ್ಯಮಿ ಸಹಾಯ ಹಸ್ತ ಚಾಚಿದ್ದಾರೆ. ಪತ್ರಕರ್ತರ ಸಂಘದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೆಲ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ ಮಾಡಿದರು. ನಂತರ 200ಕ್ಕೂ ಹೆಚ್ಚು ಮಂದಿಗೆ ಆಹಾರ ಕಿಟ್ ನೀಡಿ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದರು. ಸಂಕಷ್ಟದಲ್ಲಿದ್ದ ಪತ್ರಕರ್ತರಿಗೆ ಇದರಿಂದ ಸಹಾಯವಾಗಿದೆ.
TAGGED:
Mandya news