ಕರ್ನಾಟಕ

karnataka

ETV Bharat / state

ಮಂಡ್ಯ: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ

ಮಂಡ್ಯದಲ್ಲಿ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಸರ್ಕಾರಿ ನೌಕರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ
ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ

By

Published : Jul 19, 2023, 9:07 PM IST

ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ

ಮಂಡ್ಯ:ತಾಲೂಕು ಕಚೇರಿಯ ಕೊಪ್ಪ ಹೋಬಳಿಯ ಆರ್.ಟಿ.ಸಿ ತಿದ್ದುಪಡಿ ಶಾಖೆಯ ವಿಷಯ ನಿರ್ವಾಹಕ ಡಿ. ಜೆ ಮಂಜುನಾಥ್ ಸ್ವಾಮಿ ಅವರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮದ್ದೂರು ತಾಲೂಕು ಕಚೇರಿಗೆ ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ವೇಳೆ, ಸಾರ್ವಜನಿಕರು ಕಚೇರಿಯ ವಿವಿಧ ಶಾಖೆಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಬೆನ್ನಲ್ಲೇ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕೊಪ್ಪ ಹೋಬಳಿಯ ಬಿದರಮೊಳೆ ಕೊಪ್ಪಲು ಗ್ರಾಮದ ಮೋಹನ್ ಕುಮಾರ್ ಅವರ ಜಮೀನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೋರ್ಟ್ ಆದೇಶವನ್ನು ವಿಳಂಬ ಮಾಡಲು ಮಂಜುನಾಥ್ 10 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಮೋಹನ್ ಕುಮಾರ್ ಅವರು ಮಂಡ್ಯ ಲೋಕಾಯುಕ್ತ ಪೊಲೀಸರಿಗೆ ದೂರು ದಾಖಲಿಸಿದ್ದರು.

ಬುಧವಾರ ಮಧ್ಯಾಹ್ನ ಲೋಕಾಯುಕ್ತ ಪೊಲೀಸರು ನೀಡಿದ ಸೂಚನೆಯಂತೆ ವಿಷಯ ನಿರ್ವಾಹಕ ಮಂಜುನಾಥ್ ಅವರಿಗೆ ಮೋಹನ್ ಕುಮಾರ್ ತಾಲೂಕು ಕಚೇರಿಯ ಅಂಗಡಿ ಮಳಿಗೆಗಳ ಬಳಿ 10 ಸಾವಿರ ರೂಪಾಯಿ ಲಂಚವನ್ನು ನೀಡುತ್ತಿದ್ದರು. ಇದೇ ವೇಳೆ, ಲೋಕಾಯುಕ್ತ ಅಧಿಕಾರಿಗಳು ಧಿಡೀರ್ ದಾಳಿ ಮಾಡಿ, ಮಂಜುನಾಥ್ ಅವರನ್ನು ಲಂಚದ ಹಣದ ಸಮೇತ ವಶಕ್ಕೆ ತೆಗೆದುಕೊಂಡು ತಾಲೂಕು ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಕಾರ್ಯಾಚರಣೆ ವೇಳೆ ಲೋಕಾಯುಕ್ತ ಎಸ್ಪಿ ವಿ ಜೆ ಸಜಿತ್, ಡಿವೈಎಸ್​ಪಿ ಟಿ ಎನ್ ಸುನೀಲ್ ಕುಮಾರ್, ಇನ್ಸ್​ಪೆಕ್ಟರ್​ಗಳಾದ ಪ್ರಕಾಶ್, ಮೋಹನ್ ರೆಡ್ಡಿ, ಸಿಬ್ಬಂದಿಗಳಾದ ಶಂಕರ್, ಮಹದೇವಯ್ಯ, ಶರತ್, ನಂದೀಶ್, ಯೋಗೇಶ್, ಮಹದೇವಸ್ವಾಮಿ ಇದ್ದರು.

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯತ್ ಸದಸ್ಯ: ಇನ್ನೊಂದೆಡೆ ಲಂಚ ಸ್ವೀಕರಿಸಿದ್ದ ಜೋಗ - ಕಾರ್ಗಲ್ ಪಟ್ಟಣ ಪಂಚಾಯಿತಿ ಸದಸ್ಯನ ಸದಸ್ಯತ್ವ ರದ್ದುಗೊಳಿಸಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ (ಜನವರಿ 6-2023)ರಂದು ಆದೇಶಿಸಿದ್ದರು. ಹರೀಶ್ ಗೌಡ ತಮ್ಮ ಪಟ್ಟಣ ಪಂಚಾಯಿತಿ ಸದಸ್ಯತ್ವ ಕಳೆದುಕೊಂಡಿರುವವರು. ಇವರು ಜೋಗ - ಕಾರ್ಗಲ್ ಪಟ್ಟಣ ಪಂಚಾಯಿತಿಯ 8ನೇ ವಾರ್ಡ್​ನ ಸ್ವತಂತ್ರ ಅಭ್ಯರ್ಥಿಯಾಗಿ ಜಯಗಳಿಸಿದ್ದರು.

ಕೋಳಿ ಅಂಗಡಿಯ ಪರವಾನಗಿ ಮಾಡಿಸಿಕೊಡಲು ವ್ಯಕ್ತಿಯೊಬ್ಬರಿಂದ ಇವರು 50 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಲಂಚ ಸ್ವೀಕಾರ ಮಾಡಿದ ಬಳಿಕ ನಾನು ಟ್ರ್ಯಾಪ್​ ಆಗಿದ್ದೇನೆ ಎಂದು ತಿಳಿದು ಲಂಚದ ಹಣವನ್ನು ಸುಡಲು ಸಹ ಯತ್ನಿಸಿದ್ದರು. ಇದರಲ್ಲಿ ಹಲವು ನೋಟುಗಳು ಸಹ ಸುಟ್ಟು ಹೋಗಿದ್ದವು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ 8ನೇ ವಾರ್ಡ್​ನಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಅಹ್ಮದ್ ಅಬ್ದುಲ್ ಎಂಬವರಿಗೆ ಅಂಗಡಿಯ ಪರವಾನಿಗೆ ಒದಗಿಸಲು ಆರೋಪಿ ಹಣದ ಬೇಡಿಕೆ ಇಟ್ಟಿದ್ದರು‌. ಲೋಕಾಯುಕ್ತ ಡಿವೈಎಸ್​ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿತ್ತು. ಜನಪ್ರತಿನಿಧಿಗಳ ಕಾಯ್ದೆಯ ಪ್ರಕಾರ, ಭ್ರಷ್ಟಾಚಾರದಡಿ ಸಾಗರದ ಎಸಿ ಪಲ್ಲವಿ ಪಟ್ಟಣ ಪಂಚಾಯಿತಿ ಸದಸ್ಯತ್ವದಿಂದ ಹರೀಶ್ ಗೌಡರನ್ನು ವಜಾ ಮಾಡಿದ್ದರು.

ಇದನ್ನೂ ಓದಿ:ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯತ್ ಸದಸ್ಯನ ಸದಸ್ಯತ್ವ ರದ್ದು

ABOUT THE AUTHOR

...view details