ಮಂಡ್ಯ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಂಡ್ಯ ಅಭ್ಯರ್ಥಿ ವಿಚಾರವಾಗಿ ಬಿಜೆಪಿಯಲ್ಲಿ ಗೊಂದಲ ಶುರುವಾಗಿದೆ. ರಾಷ್ಟ್ರೀಯ ನಾಯಕರು ಅಭ್ಯರ್ಥಿ ಘೋಷಣೆ ಮಾಡುತ್ತಾರಾ ಅಥವಾ ಸುಮಲತಾಗೆ ಬೆಂಬಲ ನೀಡ್ತಾರಾ ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಕ್ಕೆ ಬಿಜೆಪಿ ಮುಂದಾಗಿದ್ದು, ಸಭೆ ನಡೆಸುತ್ತಿದ್ದಾರೆ.
ಲೋಕ ಸಮರ : ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ಕುರಿತು ಬಿಜೆಪಿ ನಾಯಕರುಗಳಿಂದ ಮಹತ್ವದ ಸಭೆ - ರಾಷ್ಟ್ರೀಯ ನಾಯಕರು
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಂಡ್ಯ ಅಭ್ಯರ್ಥಿ ವಿಚಾರವಾಗಿ ಬಿಜೆಪಿಯಲ್ಲಿ ಗೊಂದಲ ಶುರುವಾಗಿದೆ. ನಗರದ ಬಿಜೆಪಿ ಕಚೇರಿಯಲ್ಲಿ ಸಭೆ ನಡೆದಿದ್ದು, ಎಲ್ಲಾ ಘಟಕಗಳ ಪದಾಧಿಕಾರಿಗಳು ಚರ್ಚೆ ನಡೆಸಿದ್ದಾರೆ.
![ಲೋಕ ಸಮರ : ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ಕುರಿತು ಬಿಜೆಪಿ ನಾಯಕರುಗಳಿಂದ ಮಹತ್ವದ ಸಭೆ](https://etvbharatimages.akamaized.net/etvbharat/images/768-512-2758339-347-7a79d7bf-6ee4-4e43-a4d5-2bdb1f610201.jpg)
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಂಡ್ಯ ಅಭ್ಯರ್ಥಿ ವಿಚಾರವಾಗಿ ಬಿಜೆಪಿಯಲ್ಲಿ ಗೊಂದಲ ಶುರುವಾಗಿದೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಂಡ್ಯ ಅಭ್ಯರ್ಥಿ ವಿಚಾರವಾಗಿ ಬಿಜೆಪಿಯಲ್ಲಿ ಗೊಂದಲ ಶುರುವಾಗಿದೆ.
ನಗರದ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದು, ಎಲ್ಲಾ ಘಟಕಗಳ ಪದಾಧಿಕಾರಿಗಳು ಆಗಮಿಸಿದ್ದಾರೆ. ಸುಮಲತಾ ಬೆಂಬಲ ವಿಚಾರವಾಗಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಸುಮಲತಾಗೆ ಬೆಂಬಲ ನೀಡಿದರೆ ಎನ್‌ಡಿಎಗೆ ಅವರು ಬೆಂಬಲ ನೀಡ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.
ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂಬ ವಿಚಾರವೂ ಚರ್ಚೆಗೆ ಬಂದಿತ್ತು. ಜೆಡಿಎಸ್ ಮಣಿಸಲು ಯಾವ ನಿರ್ಧಾರ ಸೂಕ್ತ ಎಂಬುದು ಕೂಡ ಸಭೆಯಲ್ಲಿ ಚರ್ಚೆ ಆಯಿತು.