ಕರ್ನಾಟಕ

karnataka

By

Published : May 6, 2021, 3:31 AM IST

Updated : May 6, 2021, 4:54 AM IST

ETV Bharat / state

ಜನರ ಜೀವ ಉಳಿಸಲು ಲಾಕ್​ಡೌನ್ ಅನಿವಾರ್ಯ: ಹೆಚ್​ಡಿಕೆ

ಲಾಕ್​ಡೌನ್ ಅನಿವಾರ್ಯ. ಕನಿಷ್ಠ 15-20 ದಿನ ಫುಲ್ ಲಾಕ್​ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಹೆಚ್​ಡಿಕೆ
ಹೆಚ್​ಡಿಕೆ

ಮಂಡ್ಯ: ಈಗಿನ ಲಾಕ್​​ಡೌನ್​ನಿಂದ ಪ್ರಯೋಜನ ಇಲ್ಲ. ಜನರ ಜೀವ ಉಳಿಸಲು ಕಂಪ್ಲೀಟ್ ಲಾಕ್​ಡೌನ್ ಅನಿವಾರ್ಯ ಎಂದು ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ‌ಮಾತನಾಡಿದ ಅವರು, ಸೀರಿಯಸ್ಸಾಗಿ ಲಾಕ್ ಡೌನ್ ಮಾಡಿದ್ದಕ್ಕೆ ಬಾಂಬೆಯಲ್ಲಿ ಸೋಂಕಿತರ ಪ್ರಮಾಣ 2 ಸಾವಿರಕ್ಕೆ ಇಳಿದಿದೆ. ಹಾಗಾಗಿ ನಾನು ಮಾರ್ಚ್ 15ಕ್ಕೆ ಲಾಕ್ ಡೌನ್ ಮಾಡಿ ಎಂದು ಹೇಳ್ದೆ. ಅಂದು ಲಾಕ್ ಡೌನ್ ಮಾಡಿದ್ರೆ ಇಷ್ಟು ಜೀವ ಹೋಗುತ್ತಿರಲಿಲ್ಲ. ಈಗಿನಂತೆ ಲಾಕ್ ಡೌನ್ ಮಾಡಿದ್ರೆ ಉಪಯೋಗಕ್ಕೆ ಬರೋದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಜನರ ಜೀವ ಉಳಿಸಲು ಲಾಕ್​ಡೌನ್ ಅನಿವಾರ್ಯ: ಹೆಚ್​ಡಿಕೆ
ಹಿಂದಿನಂತೆ ಕಂಪ್ಲೀಟ್ ಲಾಕ್ ಡೌನ್ ಮಾಡಬೇಕು. ಸರ್ಕಾರಕ್ಕೆ ಜನರ ಜೀವ ಉಳಿಸೋದಕ್ಕಿಂತ ಕಂದಾಯ ಮುಖ್ಯವಾಗಿದೆ. ಕನಿಷ್ಠ 15ರಿಂದ 20 ದಿನ ಕಂಪ್ಲೀಟ್ ಲಾಕ್ ಡೌನ್ ಮಾಡಬೇಕು. ಜನರನ್ನು ಉಳಿಸಬೇಕೆಂದ್ರೆ ಲಾಕ್ ಡೌನ್ ಅನಿವಾರ್ಯವಾಗಿದ್ದು, ಜನರ ಜೀವ ಉಳಿಸಿದ್ರೆ ಇದೇ ಜನ ಖಜಾನೆ ತುಂಬಿಸಿ ಕೊಡ್ತಾರೆ ಎಂದು ಹೇಳಿದರು.
Last Updated : May 6, 2021, 4:54 AM IST

ABOUT THE AUTHOR

...view details