ಮಂಡ್ಯ :'ಮೈ ಶುಗರ್ ತೆಗೆದು ರಾಕ್ ಶುಗರ್ ಅಂತಾ ಇಡೋಣ' ಎಂದು ಶಾಸಕ ಸುರೇಶ್ಗೌಡ ಪರೋಕ್ಷವಾಗಿ ಮೈ ಶುಗರ್ ಮೇಲೆ ರಾಕ್ಲೈನ್ ವೆಂಕಟೇಶ್ ಕಣ್ಣು ಇದೆ ಎಂದು ಹೇಳಿದರು. ನಾಗಮಂಗಲದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಶುಗರ್ ಮುಚ್ಚಲು ಮಾಜಿ ಸಿಎಂ ಕಾರಣ ಎಂಬ ನರೇಂದ್ರ ಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಇದ್ದಾಗ ಯಾಕೆ ಓಪನ್ ಮಾಡ್ಸಿಲ್ಲಾ..? ಎಂದು ಪ್ರಶ್ನಿಸಿದ್ರು.
ಕಾರ್ಖಾನೆಯಲ್ಲಿರುವ ಶುಗರ್ ಮಾರಾಟ ಮಾಡಿದ್ರೆ ಫ್ಯಾಕ್ಟರಿ ಪ್ರಾರಂಭವಾಗುತ್ತೆ :
ಇಡೀ ದೇಶದಲ್ಲಿ ಮಂಡ್ಯ ಬಿಟ್ರೇ ಶುಗರ್ ಫ್ಯಾಕ್ಟರಿ ಬೀದರ್ನಲ್ಲಿದೆ. ಆದ್ರೆ, ಶುಗರ್ ಫ್ಯಾಕ್ಟರಿಯಿಂದ ರೈತರಿಗೆ ಆಗುವ ಅನುಕೂಲ, ಅನಾನುಕೂಲ ಬಗ್ಗೆ ತಿಳಿಯಲು ಸರ್ಕಾರದ್ದೇ ಸಂಸ್ಥೆ ಬೇಕು. ಅದಕ್ಕೆ ನಾವು ಸರ್ಕಾರವೇ ಇದನ್ನು ನಡೆಸುವಂತೆ ಒತ್ತಾಯ ಮಾಡ್ತಿರೋದು. ಹೀಗಾಗಿ, ಅಲ್ಲಿರುವ ಶುಗರ್ ಮಾರಾಟ ಮಾಡಿದ್ರೆ ಕಾರ್ಖಾನೆ ಪ್ರಾರಂಭವಾಗುತ್ತೆ ಎಂದರು.
ಕೆಲವರು ಜಿಲ್ಲೆಯ ಆಸ್ತಿ ಹೊಡೆಯೋಕೆ ಸಂಚು ಮಾಡ್ತಿದ್ದಾರೆ :
ಕೆಲವರು ಏನಾದ್ರೂ ಮಾಡಿ ಜಿಲ್ಲೆಯ ಆಸ್ತಿ ಹೊಡೆಯಲು ಸಂಚು ಮಾಡ್ತಿದ್ದಾರೆ. ಮೊದಲ ಸಭೆಯಲ್ಲೇ ಬೆಂಗಳೂರಿನಲ್ಲಿ ಸಕ್ಕರೆ ಮಂತ್ರಿಗೆ ಹೇಳಿದ್ದೇನೆ. ಸಭೆಯಲ್ಲಿ ಶಾಸಕರು, ಮಂಡ್ಯದ ರೈತ ವರ್ಗದವರು, ಸರ್ಕಾರ ಕಾರ್ಖಾನೆ ನಡೆಸುವಂತೆ ಒತ್ತಾಯ ಮಾಡ್ತಿದ್ದಾರೆ. ಆದರೆ, MP ಮಾತ್ರ ಪ್ರೈವೇಟ್ ಮಾಡುವಂತೆ ಮಾತನಾಡಿದ್ದಾರೆ.
ಸಭೆ ಮುಗಿದ ಮೇಲೆ ಹೊರಗೆ ಬಂದ್ರೆ ಚೇಂಬರ್ನಲ್ಲಿ ಒಬ್ಬರು ಪುಣ್ಯಾತ್ಮ ಕುಳಿತಿದ್ರು.. ಎಂದು ರಾಕ್ಲೈನ್ ಹೆಸರು ಹೇಳದೆ ಮೈಶುರ್ ತೆಗೆದುಕೊಳ್ಳಲು ರಾಕ್ಲೈನ್ ವೆಂಕಟೇಶ್ ಮುಂದಾಗಿದ್ದಾರೆ ಎಂದು ತಿಳಿಸಿದರು. ಈ ಸಭೆಗೆ ಇವರು ಯಾಕೆ ಬಂದಿದ್ದಾರೆ ಅಂತಾ ಅನುಮಾನ ಬಂತು. ಈ ಎಲ್ಲಾ ಎಪಿಸೋಡ್ಗಳಿಗೂ ಶುಗರ್ ಫ್ಯಾಕ್ಟರಿನೂ ಒಂದು ಕಾರಣ.