ಕರ್ನಾಟಕ

karnataka

ETV Bharat / state

ಸತತ ಮೂರು ತಿಂಗಳ ಕಾರ್ಯಾಚರಣೆ: ಕೆಆರ್​​ಎಸ್ ಬೃಂದಾವನದಲ್ಲಿ ಬೋನಿಗೆ ಬಿದ್ದ ಚಿರತೆ - leopard

ಮಂಡ್ಯ ಜಿಲ್ಲೆಯ ಬೃಂದಾವನ ಗಾರ್ಡನ್​ ಸುತ್ತಮುತ್ತಲ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಗುರುವಾರ ಬೆಳಗ್ಗೆ ಸುಮಾರು 5 ಗಂಟೆ ಸಮಯದಲ್ಲಿ ಸೆರೆಯಾಗಿದೆ.

leopard
ಕೆಆರ್​​ಎಸ್ ಬೃಂದಾವನದಲ್ಲಿ ಬೋನಿಗೆ ಬಿದ್ದ ಚಿರತೆ

By

Published : Dec 29, 2022, 2:16 PM IST

Updated : Dec 29, 2022, 3:33 PM IST

ಕೆಆರ್​​ಎಸ್ ಬೃಂದಾವನದಲ್ಲಿ ಬೋನಿಗೆ ಬಿದ್ದ ಚಿರತೆ

ಮಂಡ್ಯ: ಕಳೆದ ಮೂರು ತಿಂಗಳಿನಿಂದ ವಿಶ್ವ ವಿಖ್ಯಾತ ಕಷ್ಣರಾಜಸಾಗರ ಜಲಾಶಯ ಹಾಗೂ ಬೃಂದಾವನ ಗಾರ್ಡನ್ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಈ ಚಿರತೆ ಪ್ರವಾಸಿಗರು ಹಾಗೂ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಗುರುವಾರ ಬೆಳಗಿನ ಜಾವ ಚಿರತೆ ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸೆರೆ ಸಿಕ್ಕದೆ.

ಸೆರೆ ಸಿಕ್ಕ ಚಿರತೆ:ಬೃಂದಾವನ ಗಾರ್ಡನ್ ಬಳಿಯ ಉತ್ತರದ ಗೇಟ್‌ನ ವಿಸಿ ನಾಲೆ ಹತ್ತಿರ ಕಳೆದ ಮೂರು ತಿಂಗಳ ಹಿ೦ದೆ ಇರಿಸಿದ್ದ ಬೋನ್​ಗೆ, ಚಿರತೆ ಗುರುವಾರ ಬೆಳಗ್ಗೆ ಸುಮಾರು 5 ಗಂಟೆ ಸಮಯದಲ್ಲಿ ಸೆರೆಯಾಗಿದೆ. ಸುಮಾರು 5 ವರ್ಷದ ಹೆಣ್ಣು ಚಿರತೆ ಇದು ಎಂದು ತಿಳಿದು ಬಂದಿದೆ. ರಾಜ್ಯ ಕೈಗಾರಿಕಾ ಭದ್ರತಾ ಪಡೆ ವೃತ್ತ ನಿರೀಕ್ಷಕ ಸಂತೋಷ್ ಬೋನಿನಲ್ಲಿ ಚಿರತೆ ಸೆರೆ ಸಿಕ್ಕಿರುವುದನ್ನು ಖಚಿತಪಡಿಸಿಕೊಂಡು ಅರಣ್ಯ ಇಲಾಖೆ ಹಾಗೂ ನಿಗಮದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಚಿರತೆ ನಾಲ್ಕು ಬಾರಿ ಕಾಣಿಸಿಕೊಂಡಿತ್ತು. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕಾವೇರಿ ನೀರಾವರಿ ನಿಗಮ ಕಳೆದ ನವೆಂಬರ್ 6 ರಿಂದ ಸುಮಾರು ಒಂದು ತಿಂಗಳ ಕಾಲ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.

ಟ್ರ್ಯಾಪ್​ ಕ್ಯಾಮೆರಾ ಅಳವಡಿಕೆ: ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡ ದಿನದಿಂದಲೂ ಅರಣ್ಯ ಇಲಾಖೆ ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಬೋನ್ ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿತ್ತು. ಸುಮಾರು 8 ರಿಂದ 10 ಕಡೆ ಚಿರತೆ ಸೆರೆಗೆ ಬೋನ್ ಇಟ್ಟಿದ್ದರೂ ಚಿರತೆ ಮಾತ್ರ ಬೋನಿಗೆ ಬಿದ್ದಿರಲಿಲ್ಲ. ಚಿರತೆ ಪತ್ತೆಗೆ 60ಕ್ಕೂ ಹೆಚ್ಚು ಕಡೆ ಟ್ರ್ಯಾಪ್ ಕ್ಯಾಮೆರಾ ಅಳವಡಿಸಲಾಗಿತ್ತು.

ಮತ್ತೆರಡು ಚಿರತೆಗಳಿರುವ ಶಂಕೆ: ಒಂದೆರಡು ಕಡೆ ಸಿಸಿಟಿವಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಹೈರಾಣಾಗಿದ್ದರು. ಸದ್ಯ ಬೋನಿನಲ್ಲಿ ಸೆರೆಯಾಗಿರುವ ಚಿರತೆಯನ್ನು ಮೇಲಧಿಕಾರಿಗಳ ಸೂಚನೆ ಮೇರೆಗೆ ಬಂಡಿಪುರ ಅಥವಾ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಬಿಡಲು ತೀರ್ಮಾನಿಸಲಾಗಿದೆ. ಬೃಂದಾವನ ಗಾರ್ಡನ್ ಆರಣ್ಯ ಪ್ರದೇಶದಲ್ಲಿ ಒಂದು ಚಿರತೆ ಸೆರೆಯಾದರೂ ಮತ್ತೆರಡು ಚಿರತೆಗಳಿರುವ ಶಂಕೆ ವ್ಯಕ್ತವಾಗಿದೆ.

ಮತ್ತೆ ಕಾರ್ಯಾಚರಣೆ ಮುಂದುವರಿಕೆ: ಪ್ರವಾಸಿಗರು ಹಾಗೂ ಸ್ಥಳೀಯ ಅಧಿಕಾರಿಗಳಲ್ಲಿ ಆತಂಕ ಮುಂದುವರೆದಿದೆ. ಸ್ಥಳೀಯ ಅಧಿಕಾರಿಗಳ ಮಾಹಿತಿ ಪ್ರಕಾರ, ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳಿರುವುದು ತಿಳಿದು ಬಂದಿದೆ. ಇನ್ನು ಕೆಲ ದಿನಗಳ ಕಾಲ ಬೋನ್ ಮತ್ತೆ ಇಟ್ಟು ಕಾರ್ಯಾಚರಣೆ ಮುಂದುವರೆಸುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಮುಳ್ಳುಹಂದಿ ಬೇಟೆಗೆ ಬಂದು ಬೆದರಿತು ನೋಡಿ

ಸಕ್ಕರೆ ನಾಡಿನ ಜೀವನಾಡಿ ಕೆಆರ್‌ಎಸ್‌ನ ಬೃಂದಾವನದಲ್ಲಿ ಆಗಾಗ ಚಿರತೆಗಳು ಕಾಣಿಸಿಕೊಳ್ಳುತ್ತಿರುತ್ತವೆ. ಹಾಗಾಗಿ ಈ ವಿಷಯ ಅಲ್ಲಿನ ಸಿಬ್ಬಂದಿಯ ನಿದ್ದೆಗೆಡಿಸಿದೆ. ಅ.23 ರಂದ ಚಿರತೆ ಕಾಣಿಕೊಂಡ ನಂತರ, ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಇದಾದ ನಂತರ ನವೆಂಬರ್​ ತಿಂಗಳಿನಲ್ಲಿ ಚಿರತೆ ಮತ್ತೆ ಕಾಣಿಸಿಕೊಂಡಿತ್ತು.

ಇದನ್ನೂ ಓದಿ: ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ; ಪ್ರವಾಸಿಗರಿಗೆ ನಿರ್ಬಂಧ

Last Updated : Dec 29, 2022, 3:33 PM IST

ABOUT THE AUTHOR

...view details