ಕರ್ನಾಟಕ

karnataka

ETV Bharat / state

ಕೆಆರ್‌ಎಸ್‌ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ - ಈಟಿವಿ ಭಾರತ ಕನ್ನಡ

ಕೃಷ್ಣರಾಜ ಅಣೆಕಟ್ಟಿನ ಬೃಂದಾವನದಲ್ಲಿ ಚಿರತೆ ಓಡಾಟ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಅಲ್ಲಿನ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರವಾಸಿಗರನ್ನು ಒಳಗಡೆ ಬಿಡದೆ ಚಿರತೆಗಾಗಿ ಶೋಧ ನಡೆಸಿದ್ದಾರೆ.

Leopard sighting again at KRS Brindavan
ಕೆಆರ್‌ಎಸ್‌ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

By

Published : Oct 29, 2022, 8:59 AM IST

ಮಂಡ್ಯ:ಜಿಲ್ಲೆಯ ಕೃಷ್ಣರಾಜ ಅಣೆಕಟ್ಟಿನ ಬೃಂದಾವನದಲ್ಲಿ ಶುಕ್ರವಾರ ಸಂಜೆ ವೇಳೆಗೆ ಮತ್ತೆ ಚಿರತೆ ಕಾಣಿಸಿಕೊಂಡು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ತಕ್ಷಣ ಅರಣ್ಯ ಇಲಾಖೆಯವರು ಪ್ರವಾಸಿಗರನ್ನು ಹೊರಗಡೆ ಕಳುಹಿಸಿ ಚಿರತೆ ಹುಡುಕಲು ಹರಸಾಹಸಪಟ್ಟಿದ್ದಾರೆ. ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಅಲ್ಲಿನ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರವಾಸಿಗರನ್ನು ಒಳಗಡೆ ಬಿಡದೆ ಚಿರತೆಗಾಗಿ ಶೋಧ ನಡೆಸಿದ್ದಾರೆ.

ಕೆಆರ್‌ಎಸ್‌ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

ಚಿರತೆ ಓಡಾಡುವ ದೃಶ್ಯವು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲ ದಿನಗಳ ಹಿಂದೆ ಡ್ಯಾಂ ಬಳಿ ಸಿಬ್ಬಂದಿ ಗಿಡಗಂಟಿ ತೆರವುಗೊಳಿಸುವಾಗ ಕೂಡ ಚಿರತೆ ಕಾಣಿಸಿಕೊಂಡಿತ್ತು. ವಿಶ್ವ ಪ್ರಸಿದ್ಧ ಬೃಂದಾವನಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿತ್ತು.

ಇದನ್ನೂ ಓದಿ:ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ; ಪ್ರವಾಸಿಗರಿಗೆ ನಿರ್ಬಂಧ

ABOUT THE AUTHOR

...view details