ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಚಿರತೆ ದಾಳಿಗೆ 16 ಕುರಿಗಳು ಬಲಿ - ಮಂಡ್ಯದಲ್ಲಿ ಚಿರತೆ ದಾಳಿಗೆ ಹದಿನಾರು ಕುರಿಗಳು ಸಾವು

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹರಳಕೆರೆ ಗ್ರಾಮದಲ್ಲಿ ಚಿರತೆ ದಾಳಿಯಿಂದ ಸುಮಾರು 16 ಕುರಿಗಳು ಸಾವನ್ನಪ್ಪಿವೆ.

sixteen sheep died by leopard attack in mandya
ಚಿರತೆ ದಾಳಿಯಿಂದ ಮಂಡ್ಯದಲ್ಲಿ ಕುರಿಗಳು ಬಲಿ

By

Published : Dec 26, 2021, 4:33 PM IST

ಮಂಡ್ಯ: ಚಿರತೆ ದಾಳಿಗೆ ಸುಮಾರು 16 ಕುರಿಗಳು ಬಲಿಯಾಗಿರುವ ಘಟನೆ ಜಿಲ್ಲೆಯ ಹರಳಕೆರೆ ಗ್ರಾಮದಲ್ಲಿ ನಡೆದಿದೆ.

ಚಿರತೆ ದಾಳಿಯಿಂದ ಮಂಡ್ಯದಲ್ಲಿ ಕುರಿಗಳು ಸಾವು

ಜಿಲ್ಲೆಯ ಮದ್ದೂರು ತಾಲೂಕಿನ ಹರಳಕೆರೆ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಕುರಿ ಕೊಟ್ಟಿಗೆ ಮೇಲೆ ಚಿರತೆ ದಾಳಿ ಮಾಡಿ ಬರೋಬ್ಬರಿ 16 ಕುರಿಗಳನ್ನು ಕೊಂದು ಹಾಕಿದೆ. ಸಾವನ್ನಪ್ಪಿರುವ ಕುರಿಗಳು ಕಸ್ತೂರಮ್ಮ ಎಂಬುವರಿಗೆ ಸೇರಿವೆ ಎಂದು ತಿಳಿದುಬಂದಿದೆ.

ಘಟನೆಯಿಂದ ಕಸ್ತೂರಮ್ಮಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಪರಿಹಾರಕ್ಕಾಗಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ. ಇತ್ತ ಘಟನೆಯಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ABOUT THE AUTHOR

...view details