ಕರ್ನಾಟಕ

karnataka

ETV Bharat / state

ಗ್ರಾಮದ ಹೊರ ವಲಯದಲ್ಲಿ ಅಸ್ವಸ್ಥವಾಗಿ ಬಿದ್ದ ಚಿರತೆ.. ಅರಣ್ಯಾಧಿಕಾರಿಗಳು ಬರುವಷ್ಟರಲ್ಲೇ ಸಾವು - ಮಂಡ್ಯದಲ್ಲಿ ಚಿರತೆ ಸಾವು,

ಗ್ರಾಮದ ಹೊರ ವಲಯದಲ್ಲಿ ಅಸ್ವಸ್ಥವಾಗಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಈ ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲೇ ಚಿರತೆ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ.

Leopard death, Leopard death in Mandya, Mandya news, ಚಿರತೆ ಸಾವು, ಮಂಡ್ಯದಲ್ಲಿ ಚಿರತೆ ಸಾವು, ಮಂಡ್ಯ ಸುದ್ದಿ,
ಅರಣ್ಯಾಧಿಕಾರಿಗಳು ಬರುವಷ್ಟರಲ್ಲೇ ಸಾವನ್ನಪ್ಪಿದ ಚಿರತೆ

By

Published : Jul 12, 2021, 2:02 PM IST

ಮಂಡ್ಯ:ಚಿರತೆ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಯತ್ತಂಬಾಡಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಮಳವಳ್ಳಿ ತಾಲೂಕಿನ‌ ಯತ್ತಂಬಾಡಿ ಗ್ರಾಮದ ಬಯಲು ಪ್ರದೇಶದಲ್ಲಿ ಇಂದು ಬೆಳಗ್ಗೆ ಚಿರತೆ ಕಂಡು ಗ್ರಾಮಸ್ಥರು ಗಾಬರಿಯಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಚಿರತೆ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ‌.

ಅರಣ್ಯಾಧಿಕಾರಿಗಳು ಬರುವಷ್ಟರಲ್ಲೇ ಸಾವನ್ನಪ್ಪಿದ ಚಿರತೆ

ಸಾವನ್ನಪ್ಪಿದ ಚಿರತೆ ನೋಡಲು ಜನರು ಮುಗಿಬಿದ್ದಿದ್ದಾರೆ. ಚಿರತೆ ಯಾವ ಕಾರಣಕ್ಕೆ ಮೃತಪಟ್ಟಿದೆ ಎಂಬುದು ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮತ್ತಷ್ಟು ಮಾಹಿತಿ ತಿಳಿಯಲಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details