ಕರ್ನಾಟಕ

karnataka

ETV Bharat / state

ಶ್ರೀರಂಗಪಟ್ಟಣದ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ: ರೈತರಲ್ಲಿ ಆತಂಕ - ಶ್ರೀರಂಗಪಟ್ಟಣದಲ್ಲಿ ಚಿರತೆ ಮರಿಗಳು ಪತ್ತೆ ಸುದ್ದಿ

ಶ್ರೀರಂಗಪಟ್ಟಣ ತಾಲೂಕಿನ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಆಗಮಿಸಿರುವ ಅರಣ್ಯ ಅಧಿಕಾರಿಗಳು ರಾತ್ರಿ ವೇಳೆಗೆ ತಾಯಿ ಬಂದು ಮರಿಗಳನ್ನು ತೆಗೆದುಕೊಂಡು ಹೋಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ

By

Published : May 16, 2020, 7:38 PM IST

Updated : May 16, 2020, 9:10 PM IST

ಮಂಡ್ಯ: ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗುತ್ತಿದೆ. ಅರಣ್ಯದಲ್ಲಿ ಇರಬೇಕಾದ ಚಿರತೆಗಳು ರೈತರ ಜಮೀನಿನಲ್ಲಿ ವಾಸಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಜಮೀನೊಂದರಲ್ಲಿ ಕಣ್ಣು ಬಿಡದ ಚಿರತೆ ಮರಿಗಳು ಪತ್ತೆಯಾಗಿವೆ. ಇದು ರೈತರ ಆತಂಕವನ್ನು ಇಮ್ಮಡಿಗೊಳಿಸಿದೆ.

ಶ್ರೀರಂಗಪಟ್ಟಣ ತಾಲೂಕಿನ ಆಲಗೂಡು ಸಮೀಪದ ಕಬ್ಬಿನ ಜಮೀನಿನಲ್ಲಿ ಎರಡು ಚಿರತೆ ಮರಿಗಳು ಪತ್ತೆಯಾಗಿವೆ. ತಾಯಿ ಮರಿಗಳನ್ನು ಬಿಟ್ಟು ಹೋಗಿದ್ದು, ಕಬ್ಬು ಕಟಾವು ಮಾಡುವಾಗ ಮರಿಗಳು ಕೂಲಿ ಕಾರ್ಮಿಕರಿಗೆ ಸಿಕ್ಕಿವೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮರಿಗಳನ್ನು ಅದೇ ಸ್ಥಳದಲ್ಲಿ ಬಿಟ್ಟಿದ್ದು, ರಾತ್ರಿ ವೇಳೆಗೆ ತಾಯಿ ಬಂದು ಮರಿಗಳನ್ನು ತೆಗೆದುಕೊಂಡು ಹೋಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ಕಬ್ಬಿನ ಗದ್ದೆಗಳನ್ನು ಚಿರತೆಗಳು ವಾಸಸ್ಥಾನ ಮಾಡಿಕೊಳ್ಳುತ್ತಿರುವುದು ರೈತರ ಭೀತಿಗೆ ಕಾರಣವಾಗಿದೆ.

Last Updated : May 16, 2020, 9:10 PM IST

ABOUT THE AUTHOR

...view details