ಮಂಡ್ಯ: ಇಬ್ಬರು ರೈತರು ಸೇರಿ 7 ವರ್ಷದ ಮಗು ಮೇಲೆ ಚಿರತೆ ದಾಳಿ ನಡೆಸಿದ್ದು, ಎಲ್ಲರೂ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೇಲುಕೋಟೆ ತೊಟ್ಟಿಲುಮಡು ಪ್ರದೇಶದಲ್ಲಿ ಹಾಡು ಹಗಲೇ ಈ ಘಟನೆ ನಡೆದಿದೆ.
ರೈತರು ಜಮೀನಿನಲ್ಲಿ ವ್ಯವಸಾಯ ಮಾಡುವಾಗ ಆಹಾರ ಅರಸಿ ಬಂದ ಚಿರತೆ ರೈತರನ್ನು ಅಟ್ಟಿಸಿಕೊಂಡು ಹೋಗಿದೆ. ಭಯಭೀತರಾದ ಜನ ತಪ್ಪಿಸಿಕೊಳ್ಳಲು ಯತ್ನಿಸುವಾಗ ಕಲ್ಲು ಬಂಡೆಗಳ ಮೇಲೆ ಬಿದ್ದು ಗಾಯಗಳಾಗಿವೆ ಎನ್ನಲಾಗಿದೆ.