ಕರ್ನಾಟಕ

karnataka

ETV Bharat / state

ರೈತ ಹಾಗೂ ಅರಣ್ಯಾಧಿಕಾರಿ ಮೇಲೆ ಚಿರತೆ ದಾಳಿ - Leopard attack in mandya

ಪದೇಪದೆ ಮೇಲುಕೋಟೆ ಪ್ರವಾಸಿ ತಾಣದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದೆ. ಇಂದು ನಡೆದ ಚಿರತೆ ದಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ..

leopard-attack-on-farmer-and-forest-officer
ಚಿರತೆ ದಾಳಿ

By

Published : Mar 29, 2021, 8:29 PM IST

ಮಂಡ್ಯ :ಅರಣ್ಯಾಧಿಕಾರಿ ಹಾಗೂ ರೈತನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಕನಕೆರೆ ಗ್ರಾಮಲ್ಲಿ ನಡೆದಿದೆ. ಈ ಗ್ರಾಮದ ಪ್ರತಾಪ್ ಹಾಗೂ ಅರಣ್ಯಾಧಿಕಾರಿ ಮರಿಸ್ವಾಮಿ ಎಂಬುವರ ಮೇಲೆ ಚಿರತೆ ದಾಳಿ ಮಾಡಿದೆ. ಸದ್ಯ ರೈತ ಹಾಗೂ ಅಧಿಕಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರೈತ ಹಾಗೂ ಅರಣ್ಯಾಧಿಕಾರಿ ಮೇಲೆ ಚಿರತೆ ದಾಳಿ

ಜಮೀನಿನಲ್ಲಿ ಹುಲ್ಲು ಕೊಯ್ಯುವ ವೇಳೆ ರೈತನ ಮೇಲೆ ಚಿರತೆ ದಾಳಿ ನಡೆಸಿದೆ. ಈ ವೇಳೆ ಅಲ್ಲೇ ಇದ್ದ ಅರಣ್ಯಾಧಿಕಾರಿ ರೈತನನ್ನು ರಕ್ಷಿಸಲು ಮುಂದಾದ ವೇಳೆ ಅವರ ಮೇಲೂ ದಾಳಿ ನಡೆಸಿದೆ. ಇಬ್ಬರು ಕಿರುಚೋದು ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಚಿರತೆ ಓಡಿಸಿದ್ದಾರೆ.

ಮೇಲುಕೋಟೆ ಪ್ರವಾಸಿ ತಾಣದಲ್ಲಿ ಚಿರತೆ ಕಾಟ :ಪದೇಪದೆ ಮೇಲುಕೋಟೆ ಪ್ರವಾಸಿ ತಾಣದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದೆ. ಇಂದು ನಡೆದ ಚಿರತೆ ದಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ.

ಗ್ರಾಮಸ್ಥರು ಚಿರತೆ ಸೆರೆಹಿಡಿಯಲು ಹಲವು ಬಾರಿ ಮನವಿ ಮಾಡಿದ್ದು, ಅದಷ್ಟು ಬೇಗ ಚಿರತೆ ಸೆರೆ ಹಿರಿಯುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಮೇಲುಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details