ಕರ್ನಾಟಕ

karnataka

ETV Bharat / state

ಬಿರುಗಾಳಿಗೆ ನೆಲಕಚ್ಚಿದ ತೆಂಗಿನ ಮರಗಳು... ಕಂಗಾಲಾದ ರೈತ ಕುಟುಂಬ - Coconut trees fell down by storm in mandya

ಬಿರುಗಾಳಿಗೆ 50ಕ್ಕೂ ಹೆಚ್ಚಿನ ತೆಂಗಿನ ಮರಗಳು ಬುಡ ಸಮೇತ ಬಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಮಂಡ್ಯದಲ್ಲಿ ಕೆಳಗೆ ಬಿದ್ದ ತೆಂಗಿನ ಮರಗಳು, Coconut trees fell down by storm in mandya
ಬಿರುಗಾಳಿಗೆ ಬದುಕು ಕಳೆದುಕೊಂಡ ರೈತ ಕುಟುಂಬ: ಧರೆಗುರುಳಿದ ತೆಂಗಿನ ಮರಗಳು

By

Published : May 24, 2020, 2:03 PM IST

ಮಂಡ್ಯ:ಬಿರುಗಾಳಿಗೆ 50ಕ್ಕೂ ಹೆಚ್ಚು ತೆಂಗಿನ ಮರಗಳು ನೆಲಕ್ಕುರುಳಿ ರೈತನಿಗೆ ಅಪಾರ ನಷ್ಟವಾದ ಘಟನೆ ಕೆ.ಆರ್. ಪೇಟೆ ತಾಲೂಕಿನ ಹಿರಿಕಳಲೆ ಗ್ರಾಮದಲ್ಲಿ ನಡೆದಿದೆ.

ಬಿರುಗಾಳಿಗೆ ಬದುಕು ಕಳೆದುಕೊಂಡ ರೈತ ಕುಟುಂಬ: ಧರೆಗುರುಳಿದ ತೆಂಗಿನ ಮರಗಳು

ರೈತ ಮಹಿಳೆ ರಾಜಮ್ಮ ಮಾಕೇಗೌಡ ಎಂಬುವರಿಗೆ ಸೇರಿದ ಸರ್ವೇ ನಂ 262ರಲ್ಲಿ ಬಿರುಗಾಳಿಗೆ 50ಕ್ಕೂ ಹೆಚ್ಚಿನ ತೆಂಗಿನ ಮರಗಳು ಬುಡ ಸಮೇತ ಬಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ತೆಂಗಿನ ಜೊತೆ ಬಾಳೆ ಬೆಳೆಯೂ ಕೂಡ ನಾಶವಾಗಿದ್ದು, ಅಪಾರ ನಷ್ಟವಾಗಿದೆ. ಐದು ವರ್ಷಗಳ ಹಿಂದೆ ತೆಂಗಿನ ಗಿಡಗಳನ್ನು ಹಾಕಲಾಗಿತ್ತು. ಫಲ ಬಿಟ್ಟು ತೆಂಗಿನ ಫಸಲು ಸಿಗುವ ಸಮಯಕ್ಕೆ ಬಿರುಗಾಳಿಗೆ ಮರಗಳು ಧರೆಗುರುಳಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡುವಂತೆ ರೈತ ಮನವಿ ಮಾಡಿದ್ದಾರೆ.

ABOUT THE AUTHOR

...view details