ಕರ್ನಾಟಕ

karnataka

ETV Bharat / state

ಕೊರೊನಾ ಟೆಸ್ಟ್​ಗೆ ಫೀವರ್​ ಕ್ಲಿನಿಕ್; ಸಾರಿಗೆ ಸಂಸ್ಥೆ ಕಾರ್ಯಕ್ಕೆ ಮೆಚ್ಚುಗೆ - ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ಪರೀಕ್ಷೆಗಾಗಿ ಫೀವರ್ ಕ್ಲಿನಿಕ್ ಬಸ್​

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಅ​ನ್ನು ಸಂಪೂರ್ಣವಾಗಿ ವಿನ್ಯಾಸಗೊಳಿಸಿ, ಮೊದಲ ಭಾಗದಲ್ಲಿ ಫೀವರ್ ಕ್ಲಿನಿಕ್ ಆರಂಭ ಮಾಡಿದರೆ ಮತ್ತೊಂದು ಭಾಗದಲ್ಲಿ ಗಂಟಲು ದ್ರವ ಸಂಗ್ರಹ ಕೇಂದ್ರವನ್ನು ಸ್ಥಾಪನೆ ಮಾಡಿ ಗ್ರಾಮಾಂತರ ಪ್ರದೇಶದಲ್ಲಿ ಪರೀಕ್ಷೆಗಾಗಿ ತಯಾರಿ ಮಾಡಲಾಗಿದೆ.

KSRTC bus
ಫೀವರ್ ಕ್ಲಿನಿಕ್

By

Published : May 10, 2020, 7:39 PM IST

ಮಂಡ್ಯ:ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದೊಂದಿಗೆ ಸಾರಿಗೆ ಸಂಸ್ಥೆ ಕೈ ಜೋಡಿಸಿದೆ. ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ಪರೀಕ್ಷೆಗಾಗಿ ಫೀವರ್ ಕ್ಲಿನಿಕ್ ಹಾಗೂ ಗಂಟಲು ದ್ರವ ಸಂಗ್ರಹಕ್ಕಾಗಿ ಚಲಿಸುವ ಕೇಂದ್ರವನ್ನು ಆರಂಭ ಮಾಡಲಾಗಿದೆ.

ಕೊರೊನಾ ಟೆಸ್ಟ್​ಗೆ ಫೀವರ್​ ಕ್ಲಿನಿಕ್ ಆರಂಭ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಅ​ನ್ನು ಸಂಪೂರ್ಣವಾಗಿ ವಿನ್ಯಾಸಗೊಳಿಸಿ, ಮೊದಲ ಭಾಗದಲ್ಲಿ ಫೀವರ್ ಕ್ಲೀನಿಕ್ ಆರಂಭ ಮಾಡಿದರೆ, ಮತ್ತೊಂದು ಭಾಗದಲ್ಲಿ ಗಂಟಲು ದ್ರವ ಸಂಗ್ರಹ ಕೇಂದ್ರವನ್ನು ಸ್ಥಾಪನೆ ಮಾಡಿ ಗ್ರಾಮಾಂತರ ಪ್ರದೇಶದಲ್ಲಿ ಪರೀಕ್ಷೆಗಾಗಿ ತಯಾರಿ ಮಾಡಲಾಗಿದೆ.ಈ ಬಸ್​ನಲ್ಲಿ ದ್ರವ ಸಂಗ್ರಹ ಸಿಬ್ಬಂದಿ ಜೊತೆ ಕೊರೊನಾ ವಾರಿಯರ್ಸ್ ಅಂದರೆ ವೈದ್ಯರು, ದಾದಿಯರು ತೆರಳಲಿದ್ದು, ಪ್ರಮುಖವಾಗಿ ಕೊರೊನಾ ಕಾಣಿಸಿಕೊಂಡಿರುವ ಗ್ರಾಮಗಳಿಗೆ ತೆರಳಿ ಅಲ್ಲಿನ ಗ್ರಾಮಸ್ಥರ ಪರೀಕ್ಷೆಯನ್ನು ನಡೆಸಲಿದೆ.

ಇಡೀ ಬಸ್ಅನ್ನೇ ಕೋವಿಡ್ ಕೇಂದ್ರವನ್ನಾಗಿ ಮಾಡಲಾಗಿದ್ದು, ಇದಕ್ಕಾಗಿ ಸಾರಿಗೆ ಸಂಸ್ಥೆಯ ನೌಕರರು ಕೈ ಜೋಡಿಸಿದ್ದಾರೆ. ವೈದ್ಯರು ಪರೀಕ್ಷೆ ನಡೆಸಲು ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ. ಸ್ವಾಬ್ ತೆಗೆದುಕೊಳ್ಳಲು ಸ್ವಾಬ್ ಕೊಠಡಿ ನಿರ್ಮಾಣ ಮಾಡಲಾಗಿದೆ. ಬಸ್​ನಲ್ಲಿ ಸೀಟ್​ಗಳನ್ನು ತೆಗೆದು ಸಂಚಾರಿ ಆಸ್ಪತ್ರೆ ಮಾಡಲಾಗಿದೆ. ಸದ್ಯ ಈ ಸಂಚಾರಿ ಕೋವಿಡ್ ಕ್ಲೀನಿಕ್ ಜಿಲ್ಲಾದ್ಯಂತ ಗ್ರಾಮಾಂತರ ಪ್ರದೇಶದಲ್ಲಿ ಸಂಚಾರ ಮಾಡಿ ಪರೀಕ್ಷೆಗಳನ್ನು ನಡೆಸಲಿದೆ.

ABOUT THE AUTHOR

...view details