ಕರ್ನಾಟಕ

karnataka

100 ಅಡಿ ತಲುಪಿದ ಕೃಷ್ಣರಾಜ ಸಾಗರ ಜಲಾಶಯದ​ ನೀರಿನ ಮಟ್ಟ

By

Published : Jul 21, 2021, 9:50 AM IST

124.80 ಅಡಿ ಗರಿಷ್ಠ ನೀರಿನ ಮಟ್ಟ ಹೊಂದಿರುವ ಕೃಷ್ಣರಾಜ ಸಾಗರ ಜಲಾಶಯದ ಒಟ್ಟು ಸಂಗ್ರಹ ಈಗ ನೂರರ ಗಡಿಗೆ ತಲುಪಿದೆ.

Mandya
100 ಅಡಿ ತಲುಪಿದ ಕೃಷ್ಣರಾಜ ಸಾಗರ ಜಲಾಶಯದ​ ನೀರಿನ ಮಟ್ಟ

ಮಂಡ್ಯ:ಕಳೆದ ಕೆಲ ದಿನಗಳಿಂದ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ 100 ಅಡಿಗೆ ತಲುಪಿದೆ.

124.80 ಅಡಿ ಗರಿಷ್ಠ ನೀರಿನ ಮಟ್ಟ ಹೊಂದಿರುವ ಜಲಾಶಯದಲ್ಲಿ ತಡರಾತ್ರಿ 100.05 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಒಳ ಹರಿವು 12,581 ಕ್ಯೂಸೆಕ್‌ ಇದ್ದು, 2,228 ಕ್ಯೂಸೆಕ್‌ ಕಾವೇರಿ ನದಿಗೆ ಬಿಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 22.848 ಟಿಎಂಸಿ ನೀರು ಸಂಗ್ರಹವಾಗಿದೆ.

ಕಳೆದ 2020ರ ಜುಲೈ 8ರಂದು ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿತ್ತು. ಈ ವರ್ಷವೂ ಜುಲೈ 20ಕ್ಕೆ ನೂರಡಿ ತಲುಪಿದೆ. ಕಳೆದ ಒಂದು ವಾರದ ಹಿಂದೆ 22 ಸಾವಿರಕ್ಕೂ ಅಧಿಕ ಕ್ಯೂಸೆಕ್‌ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು. ಆದರೆ, ಕೊಡಗು, ಭಾಗ ಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಹಂತ ಹಂತವಾಗಿ ಒಳ ಹರಿವಿನ ಪ್ರಮಾಣ ಕಡಿಮೆಯಾಗುತ್ತಿದೆ.

ಕೃಷ್ಣರಾಜಸಾಗರ ಜಲಾಶಯ ನೂರು ಅಡಿ ತಲುಪಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ರೈತರು ಜಮೀನುಗಳಲ್ಲಿ ಅಗತ್ಯ ಬಿತ್ತನೆ ಮಾಡಲು ಉಳುಮೆ ಕೆಲಸದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:ಪುರೋಹಿತರ ಗಲಾಟೆ ವಿಡಿಯೋ ವೈರಲ್​: ಠಾಣೆ ಮೆಟ್ಟಿಲೇರಿದ ಅರ್ಚಕರ ಜಗಳ

ABOUT THE AUTHOR

...view details