ಕರ್ನಾಟಕ

karnataka

ETV Bharat / state

ಬಾರೋ ಬಾರೋ ಮಳೆರಾಯ.. ಬೆಂಗಳೂರು ಜನಕೆ ಕುಡಿಯಲೂ ನೀರಿಲ್ಲ.. - undefined

ಕೊಡಗು ಜಿಲ್ಲೆಯಲ್ಲಿ ಸರಿಯಾದ ಮಳೆಯಾಗದೇ ಕೆಆರ್​ಎಸ್​​ ಜಲಾಶಯದ ನೀರಿನ‌‌ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ.

ಕೆ.ಆರ್.ಎಸ್

By

Published : Jun 24, 2019, 12:12 PM IST

ಮಂಡ್ಯ: ಮಳೆಗಾಲ ಆರಂಭವಾದರೂಮೈಸೂರು ಭಾಗದ ಜೀವನಾಡಿ ಕೆಆರ್​ಎಸ್​​ಗೆ ಇನ್ನೂ ಜೀವಕಳೆ ಬಂದಿಲ್ಲ. ಕೊಡಗು ಜಿಲ್ಲೆಯಲ್ಲಿ ಮಳೆ ಅಭಾವ ಈ ವ್ಯಾಪ್ತಿಯ ರೈತರ ಆತಂಕಕ್ಕೆ ಕಾರಣವಾಗಿದೆ.

ಮಳೆಗಾಲದಲ್ಲೂ ನೀರಿಲ್ಲದೇ ಬತ್ತಿರುವ ಕೆ.ಆರ್​.ಎಸ್​ ಒಡಲು

ಕೆಆರ್​ಎಸ್​ ಜಲಾಶಯದ ನೀರಿನ‌‌ ಮಟ್ಟ ದಿನೇ ದಿನೆ ಕುಸಿಯುತ್ತಿದೆ. ಮಳೆಯ ಕೊರತೆ ಎದುರಾದರೆ ರೈತರ ಆತಂಕ ಮತ್ತಷ್ಟು ಎದುರಾಗಲಿದೆ. ಸದ್ಯಕ್ಕೆ ಇರುವ ನೀರು ಕೆಲವೇ ತಿಂಗಳು ಕುಡಿಯುವುದಕ್ಕೆ ಸಾಕಾಗಲಿದೆ. ಮುಂದಿನ ದಿನಗಳಲ್ಲಿ ಕಾವೇರಿ‌ಕೊಳ್ಳದಲ್ಲಿ ಕುಡಿವ ನೀರಿಗೆ ಬರ ಎದುರಾಗಲಿದೆ.

ಮಳೆ ಬರದಿದ್ರೆ ಮಹಾನಗರ ಬೆಂಗಳೂರು ಸೇರಿ ಮೈಸೂರು , ಮಂಡ್ಯ, ತು‌ಮಕೂರು, ರಾಮನಗರ ಜಿಲ್ಲೆಯಲ್ಲಿ ಕುಡಿವ ನೀರಿಗೆ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ. ಪ್ರಸ್ತುತ ಜಲಾಶಯದ ನೀರಿನ‌ ಮಟ್ಟ ನೋಡುವುದಾದರೆ ಗರಿಷ್ಠ ಮಟ್ಟ124.80 ಅಡಿ ಇದ್ದು, ಪ್ರಸ್ತುತ ನೀರಿನ ಮಟ್ಟ-79.79 ಅಡಿಯಷ್ಟು ನೀರಿದೆ. ಇನ್ನು ಒಳಹರಿವು - 253 ಕ್ಯೂಸೆಕ್ ಇದ್ದರೆ, ಹೊರಹರಿವು-324 ಕ್ಯೂಸೆಕ್ ಇದೆ. ಇದರಲ್ಲಿ ನದಿಗೆ 274 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ‌. ಪ್ರಸ್ತುತ 10.693 ಟಿಎಂಸಿ ನೀರಿನ ಸಂಗ್ರಹವಿದೆ.

For All Latest Updates

TAGGED:

ABOUT THE AUTHOR

...view details