ಕರ್ನಾಟಕ

karnataka

ಕಾವೇರಿ ಕಣಿವೆಯಲ್ಲಿ ಬಿರುಸಿನ ಮಳೆ: KRSಗೆ ಒಳ ಹರಿವು ಹೆಚ್ಚಳ

By

Published : Jun 22, 2021, 8:55 AM IST

ಕೊಡಗಿನ ಕಾವೇರಿ ಕಣಿವೆ ಪ್ರದೇಶದಲ್ಲಿ ವರುಣ ಅಬ್ಬರಿಸುತ್ತಿದ್ದು, ಎಲ್ಲೆಡೆ ನೀರು ತುಂಬಲಾರಂಭಿಸಿ ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಅತಿಯಾದ ಮಳೆಯ ಪರಿಣಾಮ ಕೆಆರ್​ಎಸ್​ ಡ್ಯಾಂಗೆ ಒಳಹರಿವು ಹೆಚ್ಚಾಗಿದ್ದು, ಜಲಾಶಯ ಭರ್ತಿಯಾಗುವ ಸೂಚನೆ ನೀಡಿದೆ.

KRS
KRS

ಮಂಡ್ಯ:ಕಾವೇರಿ ಕಣಿವೆ ಪ್ರದೇಶದಲ್ಲಿ ಸತತ ಮಳೆ ಬಿದ್ದ ಪರಿಣಾಮ ಕೃಷ್ಣರಾಜ ಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿಗಳಿದ್ದು ಪ್ರಸ್ತುತ 94.46 ಅಡಿ ನೀರು ಏರಿಕೆಯಾಗಿದೆ.

ಈಗ ಜಲಾಶಯದ ಒಳ ಹರಿವು 11,920 ಕ್ಯೂಸೆಕ್‌ ಇದ್ದು, ಹೊರಹರಿವು 5,096 ಕ್ಯೂಸೆಕ್‌ ಆಗಿದೆ. ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ 10.395 ಟಿಎಂಸಿ. ಕೊಡಗು-ಕೇರಳ ಭಾಗಗಳ ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದರೆ ಕೆಆರ್‌ಎಸ್‌ ಜಲಾಶಯದ ಮೇಲ್ಭಾಗದ ನದಿಗಳಾದ ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ನದಿಗಳ ಮೂಲಕ ಒಳ ಹರಿವು ಪ್ರಮಾಣ ಹೆಚ್ಚಾಗಿ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತದೆ. ಈ ಮೂಲಕ ಒಳ ಹರಿವಿನ ಪ್ರಮಾಣವೂ ಹೆಚ್ಚಾಗಿ ಜಲಾಶಯ ಈ ಬಾರಿ ತುಂಬುವುದರಲ್ಲಿ ಸಂಶಯವಿಲ್ಲ.

ಇದರಿಂದಾಗಿ ಜಲಾಶಯದ ಕೆಳಭಾಗದ ರೈತರಲ್ಲಿ ಮತ್ತೊಂದು ಬೆಳೆ ಬೆಳೆಯಲು ನೀರು ದೊರಕುತ್ತದೆ ಎಂಬ ಆಶಾಭಾವನೆ ಮೂಡಿಸಿದೆ.

ಜಲಾಯಶದ ಗರಿಷ್ಠ ಮಟ್ಟ- 124.80 ಅಡಿ

ಇಂದಿನ ನೀರಿನ ಮಟ್ಟ- 94.46

ಒಳಹರಿವು- 11,920 ಕ್ಯೂಸೆಕ್‌
ಹೊರ ಹರಿವು- 5,096 ಕ್ಯೂಸೆಕ್‌
ನೀರಿನ ಪ್ರಮಾಣ- 10.395 ಟಿಎಂಸಿ

ABOUT THE AUTHOR

...view details