ಮಂಡ್ಯ: ಕುಮಾರಸ್ವಾಮಿ ಯಾವಾಗ, ಏನು ಮಾಡ್ತಾರೆ ಗೊತ್ತಾಗಲ್ಲ. ಅವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಕುಮಾರಸ್ವಾಮಿಯನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ: ಸಲೀಂ ಅಹ್ಮದ್ - ‘CM BS Yeddyurappa
ಒಮ್ಮೆ ನಮ್ಮ ಸರ್ಕಾರ ಹೋಗೋಕೆ ಬಿಜೆಪಿ ಕಾರಣ, ಡ್ರಗ್ಸ್ ಕಾರಣ ಅಂತಾರೆ. ಇವತ್ತು ಬಿಜೆಪಿಯವರನ್ನೇ ಹೋಗಿ ಭೇಟಿ ಮಾಡ್ತಾರೆ. ಅವರ ಸಿದ್ಧಾಂತ ಏನು ಅನ್ನೋದೇ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
![ಕುಮಾರಸ್ವಾಮಿಯನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ: ಸಲೀಂ ಅಹ್ಮದ್ kpcc-working-president-salim-ahammad-talks-on-kumaraswamy](https://etvbharatimages.akamaized.net/etvbharat/prod-images/768-512-8762578-336-8762578-1599814990271.jpg)
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕುಮಾರಸ್ವಾಮಿ ಯಾವಾಗ, ಏನು ಮಾಡ್ತಾರೆ ಗೊತ್ತಾಗಲ್ಲ. ಒಮ್ಮೆ ನಮ್ಮ ಸರ್ಕಾರ ಹೋಗೋಕೆ ಬಿಜೆಪಿ ಕಾರಣ, ಡ್ರಗ್ಸ್ ಕಾರಣ ಅಂತಾರೆ. ಇವತ್ತು ಬಿಜೆಪಿಯವರನ್ನೇ ಹೋಗಿ ಭೇಟಿ ಮಾಡ್ತಾರೆ. ಅವರ ಸಿದ್ಧಾಂತ ಏನು ಅನ್ನೋದೇ ಗೊತ್ತಾಗುತ್ತಿಲ್ಲ ಎಂದರು.
ಅವರು ಚರ್ಚಿಸಿದ ವಿಚಾರ ಗೌಪ್ಯವಾಗಿಯೇ ಉಳಿದಿದೆ. ಹೀಗಾಗಿ ಅವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಈ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಡಿಜೆ ಹಳ್ಳಿ ಗಲಭೆ ಪ್ರಕರಣ ಆಯ್ತು, ಈಗ ಡ್ರಗ್ಸ್ ಪ್ರಕರಣವೇ ಸಾಕ್ಷಿ. ಡ್ರಗ್ಸ್ ಪ್ರಕರಣದಲ್ಲಿ ಒತ್ತಡ ಇದೆ ಅಂತ ಮಂತ್ರಿಯವರೇ ಹೇಳ್ತಾರೆ. ರಾಗಿಣಿ ರಕ್ಷಣೆ ಮಾಡೋಕೆ ಒತ್ತಡ ಇದೆಯಾ. ಯಾರ ಒತ್ತಡ ಇದೆ ಅನ್ನೋದನ್ನು ಅವರೇ ಹೇಳಬೇಕು ಎಂದರು.