ಮಂಡ್ಯ: ಇತ್ತೀಚೆಗೆ ಮನ್ಮುಲ್ನಲ್ಲಿ ನಡೆದಿರುವ ಬೃಹತ್ ಹಾಲಿನ ಕಲಬೆರೆಕೆ ವಿಚಾರಕ್ಕೆ ಆಡಳಿತ ಮಂಡಳಿ ಸೂಪರ್ ಸೀಡ್‌ಗೆ ಹುನ್ನಾರ ನಡೆಸಿರುವ ಮಾಜಿ ಸಚಿವ ಚಲುವರಾಯಸ್ವಾಮಿ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಮಾಜಿ ಸಚಿವ ತನ್ನ ರಾಜಕೀಯದ ಪ್ರಭಾವ ಹಾಗೂ ಬೆಂಬಲಿಗರ ಮೂಲಕ ಸೂಪರ್ ಸೀಡ್ ಮಾಡಿಸಲು ಭಾರಿ ಪ್ಲಾನ್ ಮಾಡಿದ್ದು, ಜೆಡಿಎಸ್ನ ಆಡಳಿತ ಮಂಡಳಿ ಇರುವ ಕಾರಣಕ್ಕೆ ರಾಜಕೀಯ ಒತ್ತಡ ತಂದಿದ್ದಾರೆ ಎನ್ನಲಾಗಿದೆ.
ಮನ್ಮುಲ್ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಲು ನಡೆದಿತ್ತಾ ಹುನ್ನಾರ? : Audio Viral
ಆಡಿಯೋದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರ ಇಲಾಖೆ ಅಧಿಕಾರಿ ಮೂಲಕ ಒತ್ತಡ ತಂದು ಸೂಪರ್ ಸೀಡ್‌ಗೆ ಮುಂದಾಗಿರುವ ಹುನ್ನಾರ ಬಯಲಾಗಿದೆ. ರಾಜಕೀಯ ಜಿದ್ದಿಗಾಗಿ ಅಧಿಕಾರದಲ್ಲಿರುವ ಜೆಡಿಎಸ್ನ ಮನ್ಮುಲ್ ಆಡಳಿತ ಮಂಡಳಿ ಮುಗಿಸಲು ಮಾಜಿ ಸಚಿವ ಮುಂದಾಗಿದ್ದಾರೆ ಎನ್ನಲಾಗಿದೆ.
ಆಡಿಯೋದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರ ಇಲಾಖೆ ಅಧಿಕಾರಿ ಮೂಲಕ ಒತ್ತಡ ತಂದು ಸೂಪರ್ ಸೀಡ್‌ಗೆ ಮುಂದಾಗಿರುವ ಹುನ್ನಾರ ಬಯಲಾಗಿದೆ. ರಾಜಕೀಯ ಜಿದ್ದಿಗಾಗಿ ಅಧಿಕಾರದಲ್ಲಿರುವ ಜೆಡಿಎಸ್ನ ಮನ್ಮುಲ್ ಆಡಳಿತ ಮಂಡಳಿ ಮುಗಿಸಲು ಮಾಜಿ ಸಚಿವರು ಮುಂದಾಗಿದ್ದಾರೆ ಎನ್ನಲಾಗಿದೆ.
ಮಾಜಿ ಮನ್ಮುಲ್ ಅಧ್ಯಕ್ಷ ಜವರೇಗೌಡರೊಂದಿಗೆ ಸೂಪರ್ ಸೀಡ್ ವಿಚಾರದಲ್ಲಿ ಮಾತನಾಡಿರುವ ಮಾಜಿ ಸಚಿವ ಚಲುವರಾಯಸ್ವಾಮಿ ಸಂಭಾಷಣೆ ವೈರಲ್ ಆಗಿದ್ದು, ಆಡಳಿತ ಮಂಡಳಿ ವೈಫಲ್ಯ ಮುಂದಿಟ್ಟುಕೊಂಡು ಸೂಪರ್ ಸೀಡ್ ಮಾಡಿಸಲು ಹೊರಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಗ ರಾಜಕೀಯ ದ್ವೇಷಕ್ಕೆ ಬಲಿಯಾಗುತ್ತಾ ಮಂಡ್ಯ ಮನ್ಮುಲ್ನ ಆಡಳಿತ ಮಂಡಳಿ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.