ಕೆಂಪೇಗೌಡರ ಜಯಂತಿ ಆರಂಭಿಸಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತೆ: ಸಚಿವ ಚೆಲುವರಾಯಸ್ವಾಮಿ ಮಂಡ್ಯ: ಮೈಸೂರು-ಬೆಂಗಳೂರು ನಗರ ಪ್ರಪಂಚದ ಆಕರ್ಷಣೆಗೆ ಒಳಗಾಗಿವೆ ಅಂದ್ರೆ ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪೇಗೌಡರ ಅವರ ಕೊಡುಗೆ ಎನ್ನಬಹುದು. ಸದಾ ಅವರನ್ನು ನೆನಪಿಸಿಕೊಳ್ಳೋದು ನಮ್ಮೆಲ್ಲರ ಕರ್ತವ್ಯ. ಕೆಂಪೇಗೌಡರ ಜಯಂತಿ ಆರಂಭಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೆ ಎಂದು ಮಂಡ್ಯದಲ್ಲಿ ಸಚಿವ ಎನ್ ಚೆಲುವರಾಯಸ್ವಾಮಿ ತಿಳಿಸಿದರು.
ನಗರಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹಳಷ್ಟು ಜನ ಸಮಾಜ, ಜಾತಿ ಅದು ಇದು ಅಂತ ಉಪಯೋಗಿಸಿಕೊಳ್ತಾರೆ. ಆದ್ರೆ ಜಯಂತಿ ಆಚರಣೆಗೆ ಅವಕಾಶ ಕೊಟ್ಟಿದ್ದು ಕಾಂಗ್ರೆಸ್. ಅದು ಕೂಡ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ. ನನ್ನ ಉಸ್ತುವಾರಿಯಲ್ಲಿ ಮೊದಲ ಬಾರಿಗೆ ಜಯಂತಿ ಆಚರಿಸುತ್ತಿರೋದು ಎಂದು ಸಂತಸ ಹಂಚಿಕೊಂಡರು.
ಏರ್ಪೋರ್ಟ್ ನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಿಸಿದ್ದು ಬಿಜೆಪಿ ಎಂಬ ಅಶೋಕ್ ಹೇಳಿಕೆಗೆ ಬೆಂಗಳೂರು ಅಂತಾರಾಷ್ಟ್ರೀಯ ಏರ್ ಪೋರ್ಟ್ ಗೆ ಕೆಂಪೇಗೌಡರ ಹೆಸರಿಟ್ಟಿದ್ದು ಯಾರು.? ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಹೆಸರಿಟ್ಟಿರೋದು.
ಏರ್ಪೋರ್ಟ್ ಗೆ ಹೆಸರಿಟ್ಟ ಮೇಲೆ ಪ್ರತಿಮೆ ನಿರ್ಮಿಸೋದು ಅನಿವಾರ್ಯ. ಯಾರಿದ್ದರೂ ಸ್ಟ್ಯಾಚ್ಯು ಮಾಡ್ತಿದ್ದರು.
ಇನ್ನೊಂದು ಪ್ರತಿಮೆ ಇಡಲು ಹಾಕ್ತಿರಲಿಲ್ಲ. ಇಡೋದಾಗಿದ್ರೆ ಬಿಜೆಪಿಯವರು ಬೇರೆ ಪ್ರತಿಮೆ ಇಟ್ಬಿರೋರು. ಮಾಜಿ ಸಚಿವ ಆರ್ ಅಶೋಕ್ ಮಾತಾಡಿದ್ದ, ಅವರು ಬಿಟ್ರೇ ಬೇರೆ, ಯಾರೂ ಅ ಕುರಿತು ಮಾತಾಡೋಕೆ ಆಗಲ್ಲ ಎಂದು ತಿರುಗೇಟು ನೀಡಿದರು.
KRS ಡ್ಯಾಂ ನೀರಿನ ಮಟ್ಟ ಕುಸಿತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಜುಲೈ 5ನೇ ತಾರೀಖಿನ ಒಳಗೆ ಒಳ್ಳೆಯ ಮಳೆ ಬೀಳುತ್ತೆ. ಮಳೆಯಾಗುತ್ತೆ ಅಂತ ರಿಪೋರ್ಟ್ ಆಗಿದೆ. ನಾವು ಮಳೆಗಾಗಿ ಪ್ರಾರ್ಥನೆ ಮಾಡಿದ್ದೇವೆ. ಖಂಡಿತ ಇನ್ನು 5-6 ದಿವಸದಲ್ಲಿ ಒಳ್ಳೆ ಮಳೆ ಬೀಳುತ್ತೆ ಎಂಬ ನಂಬಿಕೆ ಇದೆ. ಎಲ್ಲವು ಒಳ್ಳೆಯದಾಗುತ್ತೆ ಎಂದು ಭರವಸೆ ನೀಡಿದರು.
ಲೋಕಸಭೆಗೆ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರದ ಕುರಿತಾಗಿ ಮಾತನಾಡಿದ ಅವರು, ಹೊಂದಾಣಿಕೆ ಬಿಜೆಪಿ-ಜೆಡಿಎಸ್ ಪಕ್ಷಕ್ಕೆ ಬಿಟ್ಟ ವಿಚಾರ. ಅಲೈಯನ್ಸ್ ಹಾಕ್ತಾರೋ, ಇನ್ ಡೈರೆಕ್ಟ್ ಅಲೈಯೆನ್ಸ್ ಹಾಕ್ತಾರೋ, ಇಲ್ಲ ಪೂರ್ತಿ ಮರ್ಜ್ ಆಗ್ತಾರೋ.
ಅವರ ಪಕ್ಷದ ವಿಚಾರ ಅವರಿಗೆ ಬಿಟ್ಟಿದ್ದು. ನಮಗೆ ಜನ ಜವಾಬ್ದಾರಿ ಕೊಟ್ಟಿದ್ದಾರೆ, ಕೆಲಸ ಮಾಡೋಣ. ಚುನಾವಣೆಯನ್ನು ನಮ್ಮ ಪಕ್ಷ ಎದುರಿಸುತ್ತದೆ. ಯಾವ ಪಕ್ಷ ಮಿಂಗಲ್ ಆಗುತ್ತೆ ಅನ್ನೋದು ನಮಗೆ ಅವಶ್ಯಕತೆ ಇಲ್ಲ. ಬಿಜೆಪಿ-ಜೆಡಿಎಸ್ ಗೆ ಕಾಂಗ್ರೆಸ್ ಟಾರ್ಗೆಟ್ ಅಲ್ಲದೇ ಬೇರೆ ಯಾವ ಪಕ್ಷ ಟಾರ್ಗೆಟ್ ಆಗೋಕೆ ಸಾಧ್ಯ.? ರಾಜ್ಯದಲ್ಲಿ ಇರೋದೆ ಮೂರು ಪಕ್ಷ.
ಅವರಿಬ್ಬರು ಸೇರಿದ ಮೇಲೆ ಕಾಂಗ್ರೆಸ್ ಅನ್ನೇ ಟಾರ್ಗೆಟ್ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿನ ಬಾಂಬೆ ಟೀಂ ಮೇಲೆ ಮಾಜಿ ಸಚಿವ ಈಶ್ವರಪ್ಪ ಕಿಡಿಕಾರಿದ ಕುರಿತಾಗಿ ಪ್ರತಿಕ್ರಿಯಿಸಿದ ಸಚಿವ ಚೆಲುವರಾಯಸ್ವಾಮಿ, ನಿನ್ನೆ ಟಿವಿಯಲ್ಲಿ ನಾನು ನೋಡ್ದೆ. ಅವರ ಪಕ್ಷದಲ್ಲಿ ಆಂತರಿಕ ಜಗಳ ಆಡಬೇಡಿ ಅಂತಾ ನಾವು ಹೇಳೋಕೆ ಆಗುತ್ತಾ.? ಅವರಿಗೆ ಏನೇನು ಸಮಸ್ಯೆ ಇದ್ಯೋ, ಏನೇನೂ ನೋವಿದ್ಯೋ.? ಅದನ್ನ ಅವರು, ಅವರ ನಾಯಕರು ಸರಿಪಡಿಸಿಕೊಳ್ಳಬೇಕು. ಬಿಜೆಪಿಯವರು ಏನೇನ್ ಮಾಡ್ತಾರೆ ಮಾಡ್ಲಿ. ನಾವು ನಮ್ಮ ಪಾಡಿಗೆ ಕೆಲಸ ಮಾಡ್ತೇವೆ ಎಂದು ವ್ಯಂಗ್ಯವಾಗಿ ಕುಟುಕಿದರು.
ಇದನ್ನೂಓದಿ:ಕಾಂಗ್ರೆಸ್ ಜನರಿಗೆ ಬೆಲೆ ಏರಿಕೆಯ ಗ್ಯಾರಂಟಿ ನೀಡಿದೆ : ಸಿ ಟಿ ರವಿ ವಾಗ್ದಾಳಿ