ಮಂಡ್ಯ: ಕಾವೇರಿ ಮಾತೆ ತೀರ್ಥೋದ್ಭವ ಭಕ್ತರಲ್ಲಿ ಪುಳಕ ಮೂಡಿಸಿತ್ತು. ಅತ್ತ ತೀರ್ಥೋದ್ಭವ ಆದರೆ ಇತ್ತ ಕೆಆರ್ಎಸ್ನಲ್ಲಿ ರಥೋತ್ಸವ ಹಾಗೂ ತೆಪ್ಪೋತ್ಸವ ಸಂಭ್ರಮದಿಂದ ನಡೆಯಿತು.
ಕೆಆರ್ಎಸ್ನಲ್ಲಿ ಕಾವೇರಿ ರಥೋತ್ಸವ: ತೆಪ್ಪದಲ್ಲಿ ಭವ್ಯ ಮೆರವಣಿಗೆ - ಕಾವೇರಿ ಮಾತೆಗೆ ವಿಶೇಷ ಪೂಜೆ
ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನಲ್ಲಿ ನೀರಾವರಿ ಅಧಿಕಾರಿಗಳು, ನಾಗರೀಕರು ಮಧ್ಯಾಹ್ನ ರಥೋತ್ಸವ ನಡೆಸಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಾವೇರಿ ಮಾತೆಯ ಮೂರ್ತಿಯನ್ನು ಯಾಂತ್ರೀಕೃತ ದೋಣಿಯಲ್ಲಿ ಅಲಂಕಾರ ಸಹಿತ ಕೂರಿಸಿಕೊಂಡು ತೆಪ್ಪೋತ್ಸವ ಆಚರಿಸಲಾಯಿತು.
ಕೆಆರ್ಎಸ್ನಲ್ಲಿ ಕಾವೇರಿ ರಥೋತ್ಸವ
ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನಲ್ಲಿ ನೀರಾವರಿ ಅಧಿಕಾರಿಗಳು, ನಾಗರೀಕರು ಮಧ್ಯಾಹ್ನ ರಥೋತ್ಸವ ನಡೆಸಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಬೋಟಿಂಗ್ ಪಾಯಿಂಟ್‌ನಲ್ಲಿ ಕಾವೇರಿ ಮಾತೆ ಮೂರ್ತಿಯ ತೆಪ್ಪೋತ್ಸವ ಅದ್ಧೂರಿಯಾಗಿ ನಡೆಯಿತು.
ಕಾವೇರಿ ಮಾತೆಯ ಮೂರ್ತಿಯನ್ನು ಯಾಂತ್ರೀಕೃತ ದೋಣಿಯಲ್ಲಿ ಅಲಂಕಾರ ಸಹಿತ ಕೂರಿಸಿಕೊಂಡು ತೆಪ್ಪೋತ್ಸವ ಆಚರಿಸಲಾಯಿತು. ಅಧಿಕಾರಿಗಳು ಸೇರಿದಂತೆ ಪ್ರವಾಸಿಗರೂ ಮಾತೆಗೆ ಉಘೇ ಉಘೇ ಎನ್ನುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.