ಮಂಡ್ಯ:ಕೂಲಿ ಮಾಡಿ ಮಗನನ್ನು ಓದಿಸಿದ್ದಕ್ಕೆ ತಾಯಿಯ ಬದುಕು ಈಗ ಸಾರ್ಥಕವಾಗಿದೆ. ಇಡೀ ರಾಜ್ಯಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 3ನೇ ಸ್ಥಾನ ಗಳಿಸುವ ಮೂಲಕ ತಾಯಿ ಪರಿಶ್ರಮಕ್ಕೆ ಮಗ ಕೀರ್ತಿ ತಂದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮದ್ದೂರು ಪಟ್ಟಣದ ಶಿವಪುರದ ಪೂರ್ಣ ಪ್ರಜ್ಞಾ ಶಾಲೆಯ ವಿದ್ಯಾರ್ಥಿ ಜೀವನ್ ಗೌಡ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.
ರಾಜ್ಯಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 3ನೇ ಸ್ಥಾನ ಗಳಿಸಿರುವ ಜೀವನ್ ಜೀವನ್ ಗೌಡ 625ಕ್ಕೆ 621 ಅಂಕಗಳಿಸಿದ್ದು, ಕನ್ನಡದಲ್ಲಿ 125, ಇಂಗ್ಲಿಷ್ನಲ್ಲಿ 100, ಹಿಂದಿಯಲ್ಲಿ 99, ಗಣಿತದಲ್ಲಿ 100, ಸಮಾಜದಲ್ಲಿ 98, ವಿಜ್ಞಾನದಲ್ಲಿ 99 ಅಂಕ ಪಡೆದು ಒಟ್ಟು 621 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ತಾಯಿ ಕೂಲಿ ಕೆಲಸ ಮಾಡಿ ಬೆಳೆಸಿದ್ದು, ಮಗನನ್ನು ವೈದ್ಯನನ್ನಾಗಿ ಮಾಡಬೇಕೆಂದು ಆಸೆ ಇಟ್ಟುಕೊಂಡಿದ್ದಾರೆ.ಶಾಲೆಯಲ್ಲಿ ಪರೀಕ್ಷೆಗೆ 124 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ ಅತ್ಯುನ್ನತ ದರ್ಜೆಯಲ್ಲಿ 50 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 71 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.