ಮಂಡ್ಯ: ಜೆಡಿಎಸ್ ನೇತೃತ್ವದ ಪಂಚರತ್ನ ರಥಯಾತ್ರೆಯೂ ಕಳೆದ ಹಲವು ದಿನಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇಂದು ಯಾತ್ರೆಯು ಮಂಡ್ಯ ಜಿಲ್ಲೆಯನ್ನು ಪ್ರವೇಶಿಸಿದ್ದು, ಏಳು ದಿನಗಳ ಕಾಲ ಜಿಲ್ಲೆಯ ಹಳ್ಳಿ ಹಳ್ಳಿಗೆ ತಲುಪಲಿದೆ.
ಜಿಲ್ಲೆಯ ಮಳವಳ್ಳಿ ತಾಲೂಕಿಗೆ ಆಗಮಿಸಿದ ರಥಯಾತ್ರೆಯನ್ನು ಶಾಸಕ ಅಂದಾನಿ ಮತ್ತು ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಕ್ರೇನ್ ಮೂಲಕ ಬೆಲ್ಲದ ಹಾರವನ್ನು ಹಾಕಿ ಹೂ ಮಳೆಯನ್ನು ಸುರಿಸಿ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ. ಇಂದಿನಿಂದ ಜಿಲ್ಲೆಯ ಸುಮಾರು 60 ಹಳ್ಳಿಗಳಲ್ಲಿ ಪಂಚರತ್ನ ಯಾತ್ರೆಯು ಸಾಗಲಿದ್ದು, ಸಾವಿರಾರು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಸಂಭ್ರಮಿಸುತ್ತಿದ್ದಾರೆ.
ಇನ್ನು ಮಳವಳ್ಳಿಯ ಹಲಗೂರಿನಲ್ಲಿ ಕಾರ್ಯಕ್ರಮಕ್ಕೆ ಹೆಚ್ಡಿ ಕುಮಾರಸ್ವಾಮಿ ಚಾಲನೆ ನೀಡಿದ್ದು, ಮಂಡ್ಯ ಜನತೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಪಂಚರತ್ನ ಯಾತ್ರೆಯು ಇಂದು 25 ನೇ ದಿನಕ್ಕೆ ಕಾಲಿಟ್ಟಿದ್ದು, ಯಶಸ್ವಿಯಾಗಿ ಸಾಗುತ್ತಿದೆ. ಜಿಲ್ಲೆಯ ಜನರು ನಮ್ಮ ಪಕ್ಷದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದಾರೆ ಮತ್ತು ನಮಗೆ ಪ್ರೀತಿ ಆಶೀರ್ವಾದವನ್ನೂ ನೀಡುತ್ತಿದ್ದಾರೆ ಎಂದರು.