ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಯಾವತ್ತು JDS ವೀಕ್ ಆಗಲ್ಲ : ಶಾಸಕ ಡಾ. ಕೆ ಅನ್ನದಾನಿ

ಸಿದ್ದರಾಮಯ್ಯ ಅವರ ಬಗ್ಗೆ ಪ್ರತಿಕ್ರಿಯೆ ಮಾಡುವಂತ ದೊಡ್ಡ ವ್ಯಕ್ತಿ ನಾನಲ್ಲ. ಒಂದು ಕಾಲದಲ್ಲಿ ಅವರು ನಮ್ಮ ಪಕ್ಷದಲ್ಲೇ ಇದ್ದು, ನಮ್ಮ ನಾಯಕರಾಗಿದ್ದರು. ಈಗ ಬೇಜಾರಾಗಿ ನಮ್ಮ ಪಕ್ಷ ಬಿಟ್ಟು ಹೋಗಿದ್ದಾರೆ..

MLA Annadani
ಶಾಸಕ ಡಾ.ಕೆ. ಅನ್ನದಾನಿ

By

Published : Oct 10, 2021, 8:00 PM IST

ಮಂಡ್ಯ :ಜಿಲ್ಲೆಯಲ್ಲಿ ಯಾವತ್ತು ಜೆಡಿಎಸ್ ವೀಕ್ ಆಗಲ್ಲ. ನಮ್ಮ ಪಕ್ಷ ಕಬ್ಬಿಣ ಇದ್ದ ಹಾಗೆ ಇದೆ ಎಂದು ಹೇಳುವ ಮೂಲಕ ಮಳವಳ್ಳಿ ಜೆಡಿಎಸ್‌ ಶಾಸಕ ಡಾ.ಕೆ.ಅನ್ನದಾನಿಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಶಾಸಕ ಡಾ.ಕೆ. ಅನ್ನದಾನಿ ವಾಗ್ದಾಳಿ

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿದನ್ನ ನಾನು ಒಪ್ಪಿಕೊಳ್ಳಲ್ಲ. ನಮಗೆ ಜನ, ಮತದಾರರಿದ್ದಾರೆ. ಜನರನ್ನೇ ಕೇಳಿದರೆ ಹೇಳುತ್ತಾರೆ. ಏಳಕ್ಕೆ ಏಳು ಜನ ಗೆದ್ದಿದ್ದೇವೆ. ಇದಕ್ಕಿಂತ ಗಟ್ಟಿತನ ಇನ್ನೇನು ತೋರಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

ವಿಧಾನ ಪರಿಷತ್ ಗೆಲ್ಲಿಸಿದ್ದೆ ನಮ್ಮ ಜಿಲ್ಲೆ. ಜಿಪಂ, ನಗರಸಭೆ ನಮ್ಮ ಕೈಯಲ್ಲಿದೆ. ಆದ್ರೆ, ಸಿದ್ದರಾಮಯ್ಯ ಅವರ ಬಗ್ಗೆ ಪ್ರತಿಕ್ರಿಯೆ ಮಾಡುವಂತ ದೊಡ್ಡ ವ್ಯಕ್ತಿ ನಾನಲ್ಲ. ಒಂದು ಕಾಲದಲ್ಲಿ ಅವರು ನಮ್ಮ ಪಕ್ಷದಲ್ಲೇ ಇದ್ದು, ನಮ್ಮ ನಾಯಕರಾಗಿದ್ದರು. ಈಗ ಬೇಜಾರಾಗಿ ನಮ್ಮ ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು.

ಈಗ ನಮ್ಮ ನಾಯಕರು ದೇವೇಗೌಡರು ಹಾಗೂ ಕುಮಾರಸ್ವಾಮಿ. ಅವರು ಸಿದ್ದರಾಮಯ್ಯ ಏನೇ ಮಾತನಾಡಿದರೂ ಪ್ರತಿಕ್ರಿಯೆ ನೀಡಲ್ಲ. ಆದರೆ, ಕುಮಾರಸ್ವಾಮಿ ಬಗ್ಗೆ ಮಾತನಾಡಿದರೆ ನಾವು ಸುಮ್ಮನಿರಲ್ಲ ಎಂದು ಶಾಸಕ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬೆನ್ನಿಗಿರಿದ ನಿಮ್ಮ ಹೀನ ರಾಜಕೀಯ ಯಾರಿಗೆ ಗೊತ್ತಿಲ್ಲ : ಸಿದ್ದರಾಮಯ್ಯ ವಿರುದ್ಧ ಹೆಚ್​​ಡಿಕೆ ಟ್ವೀಟಾಸ್ತ್ರ

ABOUT THE AUTHOR

...view details