ಮಂಡ್ಯ:ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಗ್ರಾಮಾಂತರ ಪ್ರದೇಶದ ನಿರ್ಗತಿಕರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಣೆ ಮಾಡಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲದ ಮಗ್ಗ ಕಾರ್ಮಿಕರು, ಆಲದಹಳ್ಳಿಯ ಕೃಷಿ ಕೂಲಿ ಕಾರ್ಮಿಕರು, ಕೆ.ಆರ್.ಎಸ್.ನ ಕೂಲಿ ಕಾರ್ಮಿಕರು, ಗಂಜಾಂ, ನಗುವಿನಹಳ್ಳಿಯ ಕೂಲಿ ಕಾರ್ಮಿಕರಿಗೆ ದವಸ ಧಾನ್ಯಗಳನ್ನು, ತರಕಾರಿಗಳನ್ನು ಮನೆ ಮನೆಗೆ ತೆರಳಿ ವಿತರಣೆ ಮಾಡಿದರು.
ಸ್ಥಳೀಯ ರೈತರಿಂದಲೇ ಖರೀದಿಸಿ ಸಂತ್ರಸ್ತರಿಗೆ ಆಹಾರ ವಿತರಿಸಿದ ಜೆಡಿಎಸ್ ಶಾಸಕ - ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲದ ಮಗ್ಗ ಕಾರ್ಮಿಕರು
ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲದ ಮಗ್ಗ ಕಾರ್ಮಿಕರು, ಆಲದಹಳ್ಳಿಯ ಕೃಷಿ ಕೂಲಿ ಕಾರ್ಮಿಕರು, ಹಾಗೂ ಗ್ರಾಮಾಂತರ ಪ್ರದೇಶದ ನಿರ್ಗತಿಕರಿಗೆ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ದವಸ ಧಾನ್ಯಗಳನ್ನು ವಿತರಿಸಿದರು.
ಗ್ರಾಮಸ್ಥರ ನೆರವಿಗೆ ನಿಂತ ಜೆಡಿಎಸ್ ಎಂಎಲ್‌ಎ.
ಸ್ಥಳೀಯ ರೈತರಿಂದಲೇ ಕೆಲವು ತರಕಾರಿಗಳನ್ನು ಖರೀದಿ ಮಾಡಿದರೆ, ಮತ್ತೆ ಕೆಲ ರೈತರು ಉಚಿತ ವಿತರಣೆಗಾಗಿ ಶಾಸಕರಿಗೆ ನೀಡಿದ್ದಾರೆ. ತಾಲ್ಲೂಕಿನ ಕೂಲಿ ಕಾರ್ಮಿಕರು, ನಿರ್ಗತಿಕರನ್ನು ಗುರುತು ಮಾಡಿ ಮನೆ ಮನೆಗೆ ತೆರಳಿ ವಿತರಣೆ ಮಾಡುತ್ತಿದ್ದಾರೆ.