ಕರ್ನಾಟಕ

karnataka

ETV Bharat / state

ಮಂಡ್ಯ ಐಟಿಐ ಕಾಲೇಜು​ ಪ್ರಾಂಶುಪಾಲರಿಗೆ ಶಾಸಕ ಎಂ.ಶ್ರೀನಿವಾಸ್ ಕಪಾಳಮೋಕ್ಷ! - mandya news

ಮಂಡ್ಯ ಐಟಿಐ ಕಾಲೇಜು​ ಪ್ರಾಂಶುಪಾಲರಿಗೆ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಅವರು ಕಪಾಳ ಮೋಕ್ಷ ಮಾಡಿದ್ದಾರೆ.

JDS MLA M Shreenivas slaps Mandya ITI college principal
ಮಂಡ್ಯ ಐಟಿಐ ಕಾಲೇಲ್​ ಪ್ರಾಂಶುಪಾಲರಿಗೆ ಶಾಸಕ ಎಂ.ಶ್ರೀನಿವಾಸ್ ಕಪಾಳ ಮೋಕ್ಷ

By

Published : Jun 21, 2022, 1:19 PM IST

Updated : Jun 21, 2022, 1:49 PM IST

ಮಂಡ್ಯ: ಐಟಿಐ ಕಾಲೇಜು​ ಪ್ರಾಂಶುಪಾಲರಿಗೆ ಸಹೋದ್ಯೋಗಿಗಳ ಸಮ್ಮುಖದಲ್ಲೇ ಮಂಡ್ಯ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಅವರು ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಶಾಸಕರ ವರ್ತನೆಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.

ಮಂಡ್ಯದ ಐಟಿಐ ಕಾಲೇಜಿನಲ್ಲಿ ಸೋಮವಾರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿಗೆ ಶಾಸಕ ಎಂ.ಶ್ರೀನಿವಾಸ್ ಆಗಮಿಸಿದ್ದರು. ಈ ವೇಳೆ, ಕಾಲೇಜಿನ ವ್ಯವಸ್ಥೆ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಪ್ರಿನ್ಸಿಪಾಲ್ ನಾಗನಂದ್‌ ವಿರುದ್ಧ ಗರಂ ಆದ ಶಾಸಕರು ಎಲ್ಲರ ಎದುರೇ ಐದಾರು ಬಾರಿ ಕಪಾಳಕ್ಕೆ ಬಾರಿಸಲು ಯತ್ನಿಸಿದರಲ್ಲದೇ, 2 ಬಾರಿ ಹೊಡೆದಿದ್ದಾರೆ.

ಐಟಿಐ ಕಾಲೇಜು​ ಪ್ರಾಂಶುಪಾಲರಿಗೆ ಶಾಸಕ ಎಂ.ಶ್ರೀನಿವಾಸ್ ಕಪಾಳಮೋಕ್ಷ

ಶಾಸಕರ ವರ್ತನೆಗೆ ಹೆದರಿದ ಪ್ರಾಂಶುಪಾಲರು 'ಇರ್ಲಿ.. ಇರ್ಲಿ.. ಸರ್..' ಎನ್ನುತ್ತಾ ಸುಮ್ಮನೆ ನಿಲ್ಲುತ್ತಾರೆ. ಈ ದೃಶ್ಯವೀಗ ವೈರಲ್ ಆಗಿದೆ.

ಇದನ್ನೂ ಓದಿ:ಸರ್ಕಾರ ಹಕ್ಕುಪತ್ರ ಕೊಟ್ಟರೂ, ಸೈಟ್​ ಕಸಿದುಕೊಂಡ ಹೊಲದ ಮಾಲೀಕ.. ಗದಗ ಡಿಸಿಗೆ ರೈತರ ತರಾಟೆ

Last Updated : Jun 21, 2022, 1:49 PM IST

ABOUT THE AUTHOR

...view details