ಮಂಡ್ಯ: ನಮಗೆ ಯಾರೂ ಅನಿವಾರ್ಯ ಅಲ್ಲ, ನಾವು ಎಲ್ಲರಿಗೂ ಅನಿವಾರ್ಯ. ನಮ್ಮ ವರಿಷ್ಠರು ತೀರ್ಮಾನ ಮಾಡಿದರೆ ಏನು ಬೇಕಾದರೂ ಆಗಬಹುದು ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಜೆಡಿಎಸ್ ವರಿಷ್ಠರು ತೀರ್ಮಾನಿಸಿದರೆ ಏನು ಬೇಕಾದರೂ ಆಗಬಹುದು : ಸುರೇಶ್ ಗೌಡ - Suresh gowda
ಜೆಡಿಎಸ್ ವರಿಷ್ಠರು ತೀರ್ಮಾನ ಮಾಡಿದರೆ ಏನು ಬೇಕಾದರೂ ಆಗಬಹುದುದೆಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಜೊತೆಗೆ ನಾವು ಈಗಾಗಲೇ ಮಧ್ಯಂತರ ಚುನಾವಣೆಗೆ ಸಿದ್ಧತೆಯಲ್ಲಿದ್ದೇವೆಂದು ಹೇಳಿದರು.
ಸುರೇಶ್ ಗೌಡ
ಬಿಜೆಪಿಗೆ ಬೆಂಬಲ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವರಿಷ್ಠರ ತೀರ್ಮಾನ ಅಂತಿಮ. ನಾವು ಈಗಾಗಲೇ ಮಧ್ಯಂತರ ಚುನಾವಣೆಗೆ ಸಿದ್ಧತೆಯಲ್ಲಿದ್ದೇವೆ ಎಂದರು.
ಇನ್ನೂ ಮಾಜಿ ಸಚಿವ ಚಲುವರಾಯಸ್ವಾಮಿ ಅವರ ಕುರಿತು ಮಾತನಾಡಿ, ರಾಜಕೀಯ ವ್ಯಭಿಚಾರ ಮಾಡುತ್ತಿದ್ದವರಿಗೆ ಕ್ಷೇತ್ರದ ಮತದಾರರು ಈಗಾಗಲೇ ಬುದ್ದಿ ಕಲಿಸಿದ್ದಾರೆಂದು ತಿಳಿಸಿದರು.