ಕರ್ನಾಟಕ

karnataka

ETV Bharat / state

ಜೆಡಿಎಸ್ ಆತ್ಮಾವಲೋಕನ ಸಭೆ.. ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತು.. - ಸಿ.ಎಸ್. ಪುಟ್ಟರಾಜು

ಕೆಆರ್‌ಪೇಟೆಯ ಖಾಸಗಿ ಸಮುದಾಯ ಭವನದಲ್ಲಿ ಇಂದು ಜೆಡಿಎಸ್ ಸೋಲಿನ ಆತ್ಮಾವಲೋಕನ ಸಭೆ ನಡೆಸಲಾಯಿತು.

Revanna
ರೇವಣ್ಣ

By

Published : Dec 14, 2019, 8:23 PM IST

ಮಂಡ್ಯ:ಉಪ ಸಮರದಲ್ಲಿ ಜೆಡಿಎಸ್ ಸೋಲಿಗೆ ಯಾರು ಕಾರಣ? ಹೀಗಂತ ಕಾರ್ಯಕರ್ತರು ಹಾಗೂ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೆಆರ್‌ಪೇಟೆಯ ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ನಡೆದಿದೆ.

ಜೆಡಿಎಸ್ ಆತ್ಮಾವಲೋಕನ ಸಭೆ..

ಇಂದು ಜೆಡಿಎಸ್ ಸೋಲಿನ ಆತ್ಮಾವಲೋಕನ ಸಭೆ ಖಾಸಗಿ ಸಮುದಾಯ ಭವನದಲ್ಲಿ ಆಯೋಜನೆ ಮಾಡಲಾಗಿತ್ತು. ಮೊದಲು ಸಭೆಗೆ ಮಾಧ್ಯಮಗಳನ್ನು ನಿರ್ಬಂಧ ಮಾಡಿ ಸಭೆ ಮಾಡಲಾಯಿತು. ನಂತರ ಮಾಧ್ಯಮಗಳಿಗೆ ಅವಕಾಶ ನೀಡುತ್ತಿದ್ದಂತೆ ಕಾರ್ಯಕರ್ತರು ಮುಖಂಡರ ವಿರುದ್ಧ ಆಕ್ರೋಶ ಹೊರ ಹಾಕಿದರು.

ಮಾಜಿ ಸಚಿವರಾದ ಹೆಚ್‌ ಡಿ ರೇವಣ್ಣ ಹಾಗೂ ಸಿ ಎಸ್ ಪುಟ್ಟರಾಜು ಸಮ್ಮುಖದಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ ಸೋಲಿನ ಬಗ್ಗೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ರೇವಣ್ಣ ಹಾಗೂ ಪುಟ್ಟರಾಜು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.

ನಿಖಿಲ್‌ಗೆ ಫಿಕ್ಸ್ ಆಗಿತ್ತಾ ಉಪ ಚುನಾವಣೆ ಟಿಕೆಟ್​​:ಕಾರ್ಯಕರ್ತರು ಹಾಗೂ ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಬಿ ಎಲ್‌ ದೇವರಾಜುಗೆ ಟಿಕೆಟ್ ನೀಡಲಾಯಿತು ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಪರೋಕ್ಷವಾಗಿ ನಿಖಿಲ್ ಇಲ್ಲಿ ಸ್ಪರ್ಧಿಯಾಗಿದ್ದರು ಎಂಬುದನ್ನು ಒಪ್ಪಿಕೊಂಡರು. ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸ್ಥಳೀಯರಿಗೆ ಟಿಕೆಟ್ ಕೊಡಿ ಎಂದ್ರಿ ಕೊಟ್ವಿ. ಈಗ ಸೋತೆವು. ಮುಂದೆ ಚುನಾವಣೆ ಬರುತ್ತೆ. ಆಗ ನಾರಾಯಗೌಡ ಬಾಂಬೆಗೆ ಹೋಗ್ತಾನೆ ಎಂದು ಲೇವಡಿ ಮಾಡಿ ಮುಂದಿನ ಚುನಾವಣೆಯ ಭವಿಷ್ಯ ನುಡಿದರು.

ABOUT THE AUTHOR

...view details