ಕರ್ನಾಟಕ

karnataka

ETV Bharat / state

ಜಾಮೀಯಾ ಮಸೀದಿ ಸುತ್ತಲೂ ಬ್ಯಾರಿಕೇಡ್ ಬಳಸಿ ಪೊಲೀಸ್ ಬಂದೋಬಸ್ತ್ - Police protection in Jamiya Masjid

ಜಾಮೀಯಾ ಮಸೀದಿ ಮೇಲೆ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಹೇರಿದ್ದ ನಿಷೇಧಾಜ್ಞೆ ಮುಗಿದಿದ್ದರೂ, ಜಾಮೀಯಾ ಮಸೀದಿ ಸೇರಿದಂತೆ ಪಟ್ಟಣದಲ್ಲಿ ಪೊಲೀಸ್​ ಬಿಗಿಭದ್ರತೆ ಇನ್ನೂ ಮುಂದುವರಿದಿದೆ..

jamiya masjid controversy police protection
ಜಾಮಿಯಾ ಮಸೀದಿ ಸುತ್ತಲೂ ಬ್ಯಾರಿಕೇಡ್ ಬಳಸಿ ಪೊಲೀಸ್ ಬಂದೋಬಸ್ತ್

By

Published : Jun 6, 2022, 1:23 PM IST

ಮಂಡ್ಯ :ಹಿಂದೂಪರ ಸಂಘಟನೆಗಳು ಪಟ್ಟಣದ ಮೂಡಲ ಬಾಗಿಲು ಆಂಜನೇಯಸ್ವಾಮಿ ಮೂಲ ಸ್ಥಳ ಜಾಮೀಯಾ ಮಸೀದಿ. ಇಲ್ಲಿ ನಮಗೆ ಪೂಜೆ ಮಾಡಲು ಅವಕಾಶ ಕೊಡಿ ಎಂದು ಆಗ್ರಹಿಸಿ ಜಾಮೀಯಾ ಮಸೀದಿ ಚಲೋ ನಡೆಸಿದ್ದರು. ಈ ವೇಳೆ ಮಸೀದಿಯ ಮೇಲೆ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆ ಜಿಲ್ಲಾಡಳಿತ ಹೇರಿದ್ದ ನಿಷೇಧಾಜ್ಞೆ ಮುಗಿದಿದ್ದರೂ ಸಹ ಪಟ್ಟಣದಲ್ಲಿ ಜಾಮೀಯಾ ಮಸೀದಿ ಸೇರಿದಂತೆ ವಿವಿಧೆಡೆ ಪೊಲೀಸರ ಭದ್ರತೆ ಮುಂದುವರಿದಿದೆ.

ಜಾಮೀಯಾ ಮಸೀದಿ ಸುತ್ತಲೂ ಬ್ಯಾರಿಕೇಡ್ ಬಳಸಿ ಪೊಲೀಸ್ ಬಂದೋಬಸ್ತ್ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ. ಹಿಂದು ಸಂಘಟನೆಗಳಿಂದ ಶನಿವಾರ ನಡೆದ ಪ್ರತಿಭಟನೆ ಹಿನ್ನೆಲೆ ಶುಕ್ರವಾರ ಸಂಜೆಯಿಂದ ಭಾನುವಾರ ಬೆಳಗ್ಗಿನವರೆಗೂ ಜಿಲ್ಲಾಡಳಿತ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಗೊಳಿಸಿತ್ತು.

ಜಾಮೀಯಾ ಮಸೀದಿ ಸುತ್ತಲೂ ಬ್ಯಾರಿಕೇಡ್ ಬಳಸಿ ಪೊಲೀಸ್ ಬಂದೋಬಸ್ತ್..

ನಿಷೇಧಾಜ್ಞೆ ಅವಧಿ ಮುಗಿದರೂ ಜಾಮೀಯಾ ಮಸೀದಿಗೆ ಪೊಲೀಸ್‌ ಭದ್ರತೆ ಹಾಕಿ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಮಸೀದಿ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ:ಜಾಮೀಯಾ ಮಸೀದಿ ಪ್ರಕರಣ: ಜೂ.4 ರಂದು ಶ್ರೀರಂಗಪಟ್ಟಣ ಚಲೋಗೆ ಕರೆ, ಹೈ ಅಲರ್ಟ್

ABOUT THE AUTHOR

...view details