ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಮುಂದುವರೆದ ಐಟಿ ದಾಳಿ - kannada newspaper

ಮಂಡ್ಯ ಜಿಲ್ಲೆಯಲ್ಲಿ ಮುಂದುವರಿದ ಐಟಿ ದಾಳಿ. ಪಾಂಡವಪುರ ತಾಲೂಕಿನ ಮೇಲುಕೋಟೆ‌ ಸಮೀಪದ ಜಕ್ಕನಹಳ್ಳಿಯಲ್ಲಿ ಜೆಡಿಎಸ್ ಮುಖಂಡರ ಸಂಬಂಧಿ ರವಿ ಎಂಬುವವರ ಮನೆ ಮೇಲೆ ದಾಳಿ.

ಐಟಿ ದಾಳಿ

By

Published : Apr 1, 2019, 11:42 AM IST

ಮಂಡ್ಯ:ಜಿಲ್ಲೆಯಲ್ಲಿ ಐಟಿ ದಾಳಿ ಮುಂದುವರೆದಿದ್ದು, ನಿನ್ನೆ ಸಂಜೆ ಜೆಡಿಎಸ್ ಮುಖಂಡರ ಸಂಬಂಧಿಯೊಬ್ಬರ ಮನೆ ಮೇಲೆ ದಾಳಿ ಮಾಡಿರುವ ತಂಡ, ನಗದನ್ನು ವಶಕ್ಕೆ ಪಡೆದುಕೊಡಿದೆ ಎಂದು ಹೇಳಲಾಗಿದೆ.

ಪಾಂಡವಪುರ ತಾಲೂಕಿನ ಮೇಲುಕೋಟೆ‌ ಸಮೀಪದ ಜಕ್ಕನಹಳ್ಳಿಯಲ್ಲಿ ರವಿ ಎಂಬುವವರ ಮನೆ ಮೇಲೆ ದಾಳಿ ನಡೆದಿದೆ. ವ್ಯಾಪಾರ ಮಾಡಿಕೊಂಡಿರುವ ರವಿ ಮನೆಯಲ್ಲಿ ಸುಮಾರು 10.5 ಲಕ್ಷ ನಗದು ಸಿಕ್ಕಿದೆ ಎನ್ನಲಾಗುತ್ತಿದೆ. ಮನೆಯಲ್ಲಿ ಸಿಕ್ಕ ಚಿನ್ನಾಭರಣ ಎಲ್ಲದಕ್ಕೂ ದಾಖಲೆ ನೀಡಿದ್ದಾರೆ ಎಂದು ಹೇಳಲಾಗಿದೆ. ಮನೆಯಲ್ಲಿ ದೊರೆತ ಹಣ ಸಂಪೂರ್ಣ 100 -50 ರೂ. ಆಗಿದ್ದು ವ್ಯಾಪಾರದ ಹಣ ಎಂದು ರವಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details